ಕೆಆರ್ ಪುರ: ಜ್ಯೋತಿನಗರ ಗ್ರಾಮದ ಗೋಮಾಳ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಂತೆ ಯತಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ತೀರ್ಪು ನೀಡಿದ್ದಕ್ಕೆ ಮೇಡಹಳ್ಳಿ ಹಾಗೂ ಜ್ಯೋತಿಪುರ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು.
ಜ್ಯೋತಿನಗರ ಗ್ರಾಮದ ಸರ್ವೇ ನಂ.89 ರಲ್ಲಿ 4 ಎಕರೆ ಹದಿನೈದು ಗುಂಟೆ ಜಾಗವನ್ನು ಜಿಲ್ಲಾಧಿಕಾರಿಗಳು ಸ್ಲಂಬೋರ್ಡ್ ಗೆ ಮಂಜೂರು ಮಾಡಿದ್ದರು.
ಆದರೆ, ಗ್ರಾಮಸ್ಥರು ಕಳೆದ ಐವತ್ತು ವರ್ಷಗಳಿಂದ ಈ ಜಾಗವನ್ನು ಕಾಪಾಡಿಕೊಂಡು ಬಂದಿದ್ದರು. ಈ ಜಾಗ ಸ್ಥಳೀಯ ವಸತಿ ಹೀನರಿಗೆ ಹಾಗೂ ಆಟದ ಮೈದಾನಕ್ಕೆ ಮೀಸಲಿಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮಂಜೂರಾತಿ ಪ್ರಶ್ನಿಸಿ ಗ್ರಾಮಸ್ಥರು ಹೈಕೋರ್ಟ್ ಮೊರೆ ಹೋಗಿದ್ದರು.
ಅಷ್ಟರೊಳಗೆ ದೇವಸಂದ್ರ ಕೆರೆ ಅಂಗಳದಲ್ಲಿ ಒತ್ತುವರಿ ಮಾಡಿಕೊಂಡು ವಾಸವಿದ್ದ ನಿವಾಸಿಗಳಿಗೆ ಸ್ಲಂಬೋರ್ಡ್ ವತಿಯಿಂದ ಈ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡರು.
ಇದೀಗ ಹೈ ಕೋರ್ಟ್ ನಿಂದ ಜ್ಯೋತಿನಗರ ಗ್ರಾಮದ ಸರ್ವೇ ನಂ.89 ರಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಮಾಡದೆ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ತಡೆಯಾಜ್ಞೆ ಆದೇಶಿಸಿತು.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಥಳೀಯ ಮುಖಂಡ ಮಲ್ಲೇಶ್ , ಕಳೆದ ಐವತ್ತು ವರ್ಷ ಗಳಿಂದ ಈ ಜಾಗ ಹಳ್ಳಗಳನ್ನು ಮುಚ್ಚಿ ಉಳಿಸಿಕೊಂಡು ಬಂದಿದ್ದೇವೆ, ಸ್ಥಳೀಯ ವಸತಿ ಹೀನರಿಗೆ ಹಾಗೆ ಮಕ್ಕಳ ಆಟದ ಮೈದಾನಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದರು.
ಸ್ಥಳ ಪರಿಶೀಲಿಸದೆ ಜಿಲ್ಲಾಧಿಕಾರಿಗಳು ಏಕಾಏಕಿ ಕೆರೆ ಒತ್ತುವರಿ ಮಾಡಿಕೊಂಡಿರುವವರಿಗೆ ಮಂಜೂರು ಮಾಡಿರುವುದು ಸರಿಯಲ್ಲ ಎಂದು ಹೇಳಿದರು. ಮೇಡಹಳ್ಳಿ ಸುತ್ತಮುತ್ತಲಿನ ಮೂರು ನಾಲ್ಕು ಕಿಮೀ ದೂರದಲ್ಲಿ ಯಾವುದೇ ಸರ್ಕಾರ ಜಾಗ ಇಲ್ಲ,ಇಲ್ಲಿನ ಹತ್ತಾರು ಗ್ರಾಮದ ಮಕ್ಕಳಿಗೆ ಆಟದ ಮೈದಾನ ಇಲ್ಲ ಆದರಿಂದ ಶಾಲಾ ಕಾಲೇಜು ಮತ್ತು ಆಟದ ಮೈದಾನಕ್ಕೆ ಈ ಜಗವನ್ನ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಕೋದಂಡರಾಮಯ್ಯ, ಕೃಷ್ಣಮೂರ್ತಿ, ಮೇಡಹಳ್ಳಿ ರಾಖಿ ಮತ್ತು ಗ್ರಾಮಸ್ಥರು ಮತ್ತಿತರರಿದ್ದರು.