ಮನೆಗಳಲ್ಲಿ ಇಲಿಗಳ ಕಾಟ ಸಾಮಾನ್ಯ. ಆದರೆ ಎಷ್ಟೋ ಬಾರಿ ಈ ಇಲಿಗಳು ಕಾರಿನೊಳಗೆ ಕೂಡ ನುಗ್ಗಿ ಸೀಟುಗಳನ್ನು ಚಿಂದಿ ಮಾಡುತ್ತದೆ. ಕಾರಿನಲ್ಲಿ ತಂತಿಗಳನ್ನು ಕಿತ್ತು ಅನೇಕ ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ತಂತಿಗಳನ್ನು ಕಡಿಯುವುದರಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸುತ್ತದೆ. ಇದರಿಂದಾಗಿ ಕಾರಿನಲ್ಲಿರುವ ವಸ್ತುಗಳು ಹಾಳಾಗುತ್ತದೆ. ಇದರ ದುರಸ್ತಿಯಿಂದ ಸಾವಿರಾರು ರೂಪಾಯಿ ನಷ್ಟವಾಗುತ್ತದೆ. ಆದರೆ ಇಲಿಗಳಿಂದ ಉಂಟಾಗುವ ಸಮಸ್ಯೆಗಳನ್ನು ತೊಡೆದುಹಾಕಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಹಾಗಾದ್ರೆ ಅವು ಯಾವುವು ಎಂದು ನೋಡೋಣ ಬನ್ನಿ.
ಇಲಿಗಳನ್ನು ನಿಯಂತ್ರಿಸಲು ಇಲಿ ಪಾಷಣದಂತಹ ಉತ್ಪನ್ನಗಳು ಲಭ್ಯವಿದೆ. ಇದು ಇಲಿಗಳ ಸಾವಿಗೆ ಕಾರಣವಾಗುತ್ತದೆ. ಆದರೆ ಕೆಲವೊಮ್ಮೆ ಇಲಿಗಳು ಇದರಿಂದ ತೊಂದರೆ ಅನುಭವಿಸಿ ಸಾಯುತ್ತದೆ. ನಂತರ ಅವುಗಳನ್ನು ಹೊರತೆಗೆಯಲು ಕಷ್ಟವಾಗುತ್ತದೆ ಮತ್ತು ಕಾರು ಕೆಟ್ಟ ವಾಸನೆ ಬರಲು ಪ್ರಾರಂಭಿಸುತ್ತದೆ.
ಇಂದು ಮಾರುಕಟ್ಟೆಯಲ್ಲಿ ಅನೇಕ ಮಾರಕವಲ್ಲದ ದಂಶಕ ನಿವಾರಕಗಳು ಲಭ್ಯವಿದೆ. ಇದು ಕಾರಿನ ಸುತ್ತಲೂ ಇಲಿಗಳು ತಿರುಗಾಡುವುದನ್ನು ತಡೆಯುತ್ತದೆ ಮತ್ತು ಕಾರನ್ನು ಸುರಕ್ಷಿತವಾಗಿರಿಸುತ್ತದೆ. ಇಂತಹ ಒಂದು ಸಾಧನದ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದೇವೆ. ಇಲಿಗಳನ್ನು ಓಡಿಸುವಲ್ಲಿ ಈ ಸಾಧನವು ಪ್ರಮುಖ ಪಾತ್ರ ವಹಿಸುತ್ತದೆ.
ದಂಶಕಗಳ ಹಾವಳಿಯನ್ನು ಕಡಿಮೆ ಮಾಡಲು ನೀವು ಇಲಿ ನಿವಾರಕ ಸಾಧನವನ್ನು ಬಳಸಬಹುದು. ಈ ಸಾಧನವು ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ನೀವು ಇದನ್ನು ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಖರೀದಿಸಬಹುದು. ಆನ್ಲೈನ್ ಶಾಪಿಂಗ್ ಕುರಿತು ಹೇಳುವುದಾದರೆ, ನೀವು ಈ ಸಾಧನವನ್ನು ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ನಂತಹ ಸೈಟ್ಗಳಿಂದ 2500 ರೂ ರಿಂದ ರೂ 3000 ಕ್ಕೆ ಆರ್ಡರ್ ಮಾಡಬಹುದು.,
ಕಾರಿನಲ್ಲಿ ಈ ಸಾಧನವನ್ನು ಫಿಟ್ ಮಾಡುವುದು ತುಂಬಾ ಸುಲಭ. ಇದಕ್ಕಾಗಿ ನೀವು ಮೆಕ್ಯಾನಿಕ್ ಬಳಿ ಹೋಗುವ ಅಗತ್ಯವಿಲ್ಲ. ಈ ಸಾಧನವು ಋಣಾತ್ಮಕ ಮತ್ತು ಧನಾತ್ಮಕ ಎರಡು ತಂತಿಗಳನ್ನು ಹೊಂದಿದೆ. ಈ ತಂತಿಗಳನ್ನು ಬ್ಯಾಟರಿಯ ಋಣಾತ್ಮಕ ಮತ್ತು ಧನಾತ್ಮಕ ಟರ್ಮಿನಲ್ಗಳಿಗೆ ಸಂಪರ್ಕಿಸಬೇಕು. ಈ ಸಾಧನವು ಕಡಿಮೆ ಪ್ರಮಾಣದ ಬ್ಯಾಟರಿಯನ್ನು ಬಳಸುತ್ತದೆ ಮತ್ತು ಕಾರು ಚಾಲನೆಯಲ್ಲಿರುವಾಗ ಕಾರ್ಯನಿರ್ವಹಿಸುವುದಿಲ್ಲ.
ಇಲಿ ನಿವಾರಕ ಸಾಧನವು ಅಲ್ಟ್ರಾಸೌಂಡ್ ತರಂಗಗಳನ್ನು ಉತ್ಪಾದಿಸುತ್ತದೆ. ಇಲಿಗಳು ಈ ಅಲೆಗಳನ್ನು ಸಹಿಸುವುದಿಲ್ಲ. ಆದ್ದರಿಂದ ಇಲಿಗಳು ಓಡಿಹೋಗುತ್ತವೆ.