ಬೆಂಗಳೂರು:- ಕರ್ನಾಟಕದ ಶಾಂತಿ ಕದಡಲು ಕಾಂಗ್ರೆಸ್ ಮತ್ತು ಎಸ್ಡಿಪಿಐ ಸದಾ “ಸಿದ್ದ” ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಗಳಸ್ಯ-ಕಂಠಸ್ಯ ದೋಸ್ತಿಗಳಾದ ಕಾಂಗ್ರೆಸ್ ಮತ್ತು ಎಸ್.ಡಿ.ಪಿ.ಐ ಕರ್ನಾಟಕದ ಶಾಂತಿಯನ್ನು ಕದಡಲು ಸದಾ “ಸಿದ್ದ”ವಾಗಿವೆ. ಕೇರಳದ ನಿಷೇಧಿತ ಪಿಎಫ್ಐ ಸಂಘಟನೆಯ ನಾಸೀರ್ ಮತ್ತು ಯೂಸೂಫ್ಗೆ ಕರ್ನಾಟಕದ ನಾಗಮಂಗಲದಲ್ಲಿ ಏನು ಕೆಲಸ ಎಂದು ಪ್ರಶ್ನಿಸಿದೆ.
ನಾಗಮಂಗಲ ಗಲಭೆ ಹಿಂದೆ ಕೇರಳಿಗರ ಕೈವಾಡ ಶಂಕೆ: ಹೊಸ ಬಾಂಬ್ ಸಿಡಿಸಿದ ಆರ್ ಅಶೋಕ್!
ಹಳೇ ಮೈಸೂರು ಭಾಗದಲ್ಲಿ ಕನ್ನಡಿಗರ ನೆಮ್ಮದಿ ಕೆಡಿಸಲು ದೊಡ್ಡದೊಂದು ಷಡ್ಯಂತ್ರ ರೂಪುಗೊಂಡಿರುವುದು ನಾಗಮಂಗಲದಲ್ಲಿ ನಡೆದ ಘಟನೆಯಿಂದ ಸಾಬೀತಾಗಿದೆ. ನಾಗಮಂಗಲದಲ್ಲಿ ನಡೆದ ಗಲಭೆ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿದರೆ ಮಾತ್ರ ಕರ್ನಾಟಕದಲ್ಲಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದೆ.
ಸಿಎಂ ಸಿದ್ದರಾಮಯ್ಯ ಅವರೆ, ನಿಮ್ಮ ಓಲೈಕೆ ರಾಜಕಾರಣವನ್ನು ಸ್ವಲ್ಪ ಬದಿಗಿಟ್ಟು, ಕನ್ನಡಿಗರ ಹಿತದೃಷ್ಟಿಯಿಂದ ನಾಗಮಂಗಲ ಗಲಭೆ ಪ್ರಕರಣವನ್ನು ಎನ್ಐಎಗೆ ವಹಿಸಿ ಎಂದು ಬಿಜೆಪಿ ಆಗ್ರಹಿಸಿದೆ.