ಬೆಂಗಳೂರು: ನಮ್ಮ ಸರ್ಕಾರ ಸಮಾನತೆ ಸಾಧಿಸಿದೆ ಎಂದು ಹೇಳುವುದಿಲ್ಲ. ಆದರೆ ಸಮಾನತೆ ಸಾಧಿಸುವ ದಾರಿಯಲ್ಲಿ ಸಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ವೇಳೆ, ಮೇಲ್ಜಾತಿ ಹಾಗೂ ಕೆಳಜಾತಿ ಎನ್ನುವ ತಾರತಮ್ಯ ಇರುವ ತನಕ ರಾಜಕೀಯ ಪ್ರಜಾಪ್ರಭುತ್ವ ಬರಲು ಸಾಧ್ಯವಿಲ್ಲ.
ಆರ್ಥಿಕ, ಸಾಮಾಜಿಕ, ರಾಜಕೀಯ ಪ್ರಜಾಪ್ರಭುತ್ವ ಇಲ್ಲದೇ ಬದುಕುವುದು ಅಸಾಧ್ಯ. ಇದಕ್ಕಾಗಿ ಸಂವಿಧಾನದ ಪೀಠಿಕೆ ಅರ್ಥ ಮಾಡಿಕೊಳ್ಳಬೇಕು. ಶಾಲಾಕಾಲೇಜುಗಳಲ್ಲಿ ಸಂವಿಧಾನ ಪೀಠಿಕೆ ಓದಿಸಿ ಅರ್ಥ ಮಾಡಿಸುವ ಕೆಲಸ ಆಗುತ್ತಿದೆ. ಸಂವಿಧಾನದ ಬಗ್ಗೆ ಗೊತ್ತಿಲ್ಲದವರು ಸಮ ಸಮಾಜ ನಿರ್ಮಿಸಲಾರರು ಎಂದು ಹೇಳಿದ್ದಾರೆ.ಹಿಂದೆ ಸಿಎಂ ಆಗಿದ್ದಾಗ ಎಲ್ಲಾ ಧರ್ಮದ ಬಡವರಿಗೆ ನ್ಯಾಯ ಕೊಡುವ ಪ್ರಾಮಾಣಿಕ ಕೆಲಸ ಮಾಡಿದ್ದೇನೆ.
Onam 2024: ಓಣಂ ಹಬ್ಬಆಚರಿಸುವ ವಿಧಾನ, ಹಿಂದಿನ ಮಹತ್ವ ಮತ್ತು ವಿಶೇಷತೆ ಏನು ಗೊತ್ತಾ..?
ಈ ಬಾರಿ ಪಂಚ ಗ್ಯಾರಂಟಿ ಜಾರಿ ಮಾಡಿ, ಬಡವ, ಹಿಂದುಳಿದ, ದಲಿತರು, ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಇದನ್ನು ಟೀಕೆ ಮಾಡೋರು ವಿಚ್ಛಿದ್ರಕಾರಿ ಶಕ್ತಿಗಳು. ಸಮಾನತೆ ಹೆಸರಲ್ಲಿ ಸಮಾಜ ಒಡೆಯುವವರು ಇದ್ದಾರೆ. ಈ ಸಮಾಜ ಒಡೆಯೋರನ್ನು, ವಿಚ್ಛಿದ್ರಕಾರಿ ಶಕ್ತಿಗಳನ್ನು ಬೆಳೆಯಲು ಬಿಡಬಾರದು. ವಿಭಜಕ ಶಕ್ತಿಗಳು ಸಂವಿಧಾನ ನಿಷ್ಕ್ರಿಯ ಮಾಡಲು ಯತ್ನಿಸಿವೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.