ವಯಸ್ಸಾದಂತೆ, ನಮ್ಮ ತ್ವಚೆ ಕಾಂತಿಯನ್ನು ಕಳೆದುಕೊಂಡ ಹಾಗೆ, ನಮ್ಮ ತಲೆ ಕೂದಲಿನ ಬಣ್ಣ ಕೂಡ ಅಷ್ಟೇ ವಯಸ್ಸಾ ಗುತ್ತಾ ಹೋದಂತೆ, ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರು ಗುತ್ತದೆ! ಆದರೆ ಇಂದಿನ ದಿನಗಳಲ್ಲಿ ಹೆಚ್ಚಿನವರು, ಸಣ್ಣ ವಯಸ್ಸಿಗೆ ಕೂದಲು ಬೆಳ್ಳಗೆ ಆಗುವ ಸಮಸ್ಯೆಯನ್ನು ಎದುರಿಸುತ್ತಿ ದ್ದಾರೆ! ಇದಕ್ಕೆ ಪ್ರಮುಖ ಕಾರಣಗಳು ಕೂದಲಿಗೆ, ಕೆಮಿಕಲ್ ಅಂಶ ಹೆಚ್ಚಿರುವ ಹೇರ್ ಡೈ, ಶಾಂಪೂ, ಸೋಪ್, ಹಾಗೂ ನಾವು ಅನುಸರಿಸುತ್ತಿರುವ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳಿಂದಲೂ ಕೂಡ ಇಂದಿನ ದಿನಗಳಲ್ಲಿ, ಹೆಚ್ಚಿನವರಿಗೆ ಸಣ್ಣ ವಯಸ್ಸಿಗೆ ಕೂದಲು ಬೆಳ್ಳಗೆ ಆಗುವ ಸಮಸ್ಯೆ ಎದುರಾಗುತ್ತಿದೆ. ಬನ್ನಿ ಈ ಲೇಖನದಲ್ಲಿ ಕೂದಲಿ ಬೆಳ್ಳಗಾಗುವ ಸಮಸ್ಯೆಗೆ ಸರಳ ಮನೆಮದ್ದುಗಳ ಬಗ್ಗೆ ನೋಡೋಣ..
ಒಮ್ಮೆ ಬೆಳ್ಳಗಾದ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗಬೇಕಾದರೆ ಈ ಟಿಪ್ಸ್ ಗಳನ್ನು ಪಾಲಿಸಿ.
ತೆಂಗಿನ ಎಣ್ಣೆ ಮತ್ತು ಮೆಹಂದಿ
ತೆಂಗಿನ ಎಣ್ಣೆಯನ್ನು ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಗೋರಂಟಿ ನೈಸರ್ಗಿಕ ಕೂದಲಿನ ಬಣ್ಣವಾಗಿ ಕಾರ್ಯನಿರ್ವಹಿಸುತ್ತದೆ.ಗೋರಂಟಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ. ನಂತರ 4 ರಿಂದ 5 ಚಮಚ ತೆಂಗಿನ ಎಣ್ಣೆಯನ್ನು ಕುದಿಸಿ. ಈಗ ಈ ಎಣ್ಣೆಗೆ ಒಣಗಿದ ಗೋರಂಟಿ ಎಲೆಗಳನ್ನು ಸೇರಿಸಿ. ಎಣ್ಣೆಯಲ್ಲಿ ಬಣ್ಣ ಕಾಣಿಸಿಕೊಳ್ಳಲು ಪ್ರಾರಂಭಿಸಿದಾಗ, ಗ್ಯಾಸ್ ಆಫ್ ಮಾಡಿ. ನಂತರ ಉಗುರು ಬೆಚ್ಚಗಿರುವಾಗಲೇ ಈ ಎಣ್ಣೆಯನ್ನು ಕೂದಲಿಗೆ ಹಚ್ಚಿ. ಸುಮಾರು 30 ನಿಮಿಷಗಳ ನಂತರ, ಕೂದಲನ್ನು ಶುದ್ಧ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಕೂದಲು ಕಪ್ಪಾಗುತ್ತದೆ.
ತೆಂಗಿನೆಣ್ಣೆ ಮತ್ತು ನೆಲ್ಲಿಕಾಯಿ
ಬಿಳಿ ಕೂದಲಿನ ಸಮಸ್ಯೆಯ ಪರಿಹಾರಕ್ಕಾಗಿ ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ ಮಿಶ್ರಣ ಪ್ರಯೋಜನಕಾರಿಯಾಗಿದೆ. ನೆಲ್ಲಿಕಾಯಿ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದರಲ್ಲಿ ಆಯುರ್ವೇದ ಗುಣಗಳು ಕಂಡುಬರುತ್ತವೆ. ನೆಲ್ಲಿಕಾಯಿ ನಮ್ಮ ಚರ್ಮ ಮತ್ತು ಕೂದಲಿಗೆ ಪ್ರಯೋಜನವನ್ನು ನೀಡುತ್ತದೆ. ಈ ಹಣ್ಣಿಗೆ ಕಾಲಜನ್ ಹೆಚ್ಚಿಸುವ ಶಕ್ತಿ ಇದೆ. ಆಮ್ಲಾದಲ್ಲಿ ಹೆಚ್ಚಿನ ಪ್ರಮಾಣದ ಆರಿಲ್, ವಿಟಮಿನ್ ಸಿ ಮತ್ತು ಕಬ್ಬಿಣದ ಅಂಶ ಕಂಡುಬರುತ್ತದೆ. ಇದು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. 4 ಚಮಚ ತೆಂಗಿನ ಎಣ್ಣೆಯಲ್ಲಿ 2 ರಿಂದ 3 ಚಮಚ ಆಮ್ಲಾ ಪುಡಿಯನ್ನು ಮಿಶ್ರಣ ಮಾಡಿ ಮತ್ತು ಅದನ್ನು ಒಂದು ಪಾತ್ರೆಯಲ್ಲಿ ಇರಿಸಿ ಬಿಸಿ ಮಾಡಿ. ಈ ಪೇಸ್ಟ್ ತಣ್ಣಗಾದಾಗ ಅದನ್ನು ಕೂದಲಿಗೆ ಹಚ್ಚಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲಿಗೆ ಉತ್ತಮ ಪೋಷಣೆ ಸಿಗುತ್ತದೆ.
ಈರುಳ್ಳಿ ಮತ್ತು ನಿಂಬೆರಸ
ಅಕಾಲಿಕವಾಗಿ ಬರುವಂತಹ ಬಿಳಿ ಕೂದಲು ನಿವಾರಣೆ ಮಾಡಲು ಈರುಳ್ಳಿ ಮತ್ತು ಲಿಂಬೆರಸವು ತುಂಬಾ ಒಳ್ಳೆಯ ಔಷಧಿ. ಈರುಳ್ಳಿ ರಸದಲ್ಲಿ ಕ್ಯಾಟಲಸೆ ಎನ್ನುವ ಕಿಣ್ವವು ಸಮೃದ್ಧವಾಗಿದ್ದು, ಇದು ಹೈಡ್ರೋಜನ್ ಪೆರಾಕ್ಸೈಡ್ ನ್ನು ತಟಸ್ಥಗೊಳಿಸಿ ಬಿಳಿ ಕೂದಲು ಬರದಂತೆ ತಡೆಯಬಹುವುದು. ಈರುಳ್ಳಿಯ ಸಿಪ್ಪೆ ತೆಗೆದು ಅದನ್ನು ಮಿಕ್ಸಿಗೆ ಹಾಕಿಕೊಂಡು ಪೇಸ್ಟ್ ಮಾಡಿ. ಈ ಪೇಸ್ಟ್ ನಿಂದ ರಸ ತೆಗೆದು ಒಂದು ಲಿಂಬೆಯ ರಸ ಅದಕ್ಕೆ ಹಾಕಿಕೊಳ್ಳಿ. ಪ್ರತೀ ರಾತ್ರಿ ಈ ಮಿಶ್ರಣವನ್ನು ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಿ. ಇದರ ಫಲಿತಾಂಶ ಬೇಗನೆ ಕಂಡುಬರುವುದು
ನೆಲ್ಲಿಕಾಯಿ, ಬಾದಾಮಿ ಎಣ್ಣೆ ಮತ್ತು ತೆಂಗಿನೆಣ್ಣೆ
ಬಿಳಿ ಕೂದಲು ಬರುವುದನ್ನು ತಡೆಯಲು ಇದು ತುಂಬಾ ಪರಿಣಾಮಕಾರಿ ಔಷಧಿ. ಒಣಗಿದ ನೆಲ್ಲಿಕಾಯಿಯನ್ನು ರುಬ್ಬಿಕೊಳ್ಳಿ. ಇದಕ್ಕೆ ಬಾದಾಮಿ ಎಣ್ಣೆ ಮತ್ತು ತೆಂಗಿನೆಣ್ಣೆ ಮಿಶ್ರಣ ಮಾಡಿಕೊಳ್ಳಿ. ಪ್ರತೀ ರಾತ್ರಿ ಇದನ್ನು ತಲೆಗೆ ಮಸಾಜ್ ಮಾಡಿಕೊಳ್ಳಿ. ಬೆಳಿಗ್ಗೆ ಎದ್ದು ನೀರಿನಿಂದ ತೊಳೆಯಿರಿ.