ಟೆಸ್ಟ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ವಿಕೆಟ್ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ ತಮ್ಮದೇ ಛಾಪು ಮೂಡಿಸಿದ್ದಾರೆ. ರೆಡ್ ಬಾಲ್ ಕ್ರಿಕೆಟ್ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಪಂದ್ಯದ ಫಲಿತಾಂಶಗಳನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿರುವ ಪಂತ್, 2021-22ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆದ ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಬಾರಿಸಿದ ಅಜೇಯ 89 ರನ್ ಈಗಲೂ ಕೂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಕಾಡುತ್ತಿದೆ.
ಇಂಡೋ – ಬಾಂಗ್ಲಾ ಟೆಸ್ಟ್ ಸರಣಿಗೆ ಕೌಂಟ್ ಡೌನ್: ಟೀಂ ಇಂಡಿಯಾ ಜೊತೆ ಸೇರಿದ ಹೊಸ ಬೌಲಿಂಗ್ ಕೋಚ್ ಮಾರ್ಕೆಲ್
26 ವರ್ಷದ ಎಡಗೈ ಬ್ಯಾಟರ್ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ ಆಡಿರುವ 33 ಪಂದ್ಯಗಳಲ್ಲಿ ಈಗಾಗಲೇ 5 ಶತಗಳನ್ನು ಬಾರಿಸಿ, ದಿಗ್ಗಜ ಎಂಎಸ್ ಧೋನಿ ದಾಖಲೆ ಮುರಿವ ಸನಿಹ ಕಾಲಿಟ್ಟಿದ್ದಾರೆ. ಎಂಎಸ್ಡಿ ತಮ್ಮ ಟೆಸ್ಟ್ ವೃತ್ತಿಬದುಕಿನಲ್ಲಿ ಆಡಿದ 90 ಪಂದ್ಯಗಳಲ್ಲಿ 6 ಶತಕಗಳನ್ನು ಬಾರಿಸಿ, ಭಾರತದ ಪರ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಎಂಬ ದಾಖಲೆ ಹೊಂದಿದ್ದಾರೆ.
ಪ್ರವಾಸಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯು ಸೆಪ್ಟೆಂಬರ್ 19ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಧೋನಿ ದಾಖಲೆ ಮುರಿಯಲು ರಿಷಭ್ ಪಂತ್ ಎದುರು ನೋಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಆಸೀಸ್ ದಿಗ್ಗಜ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಹೆಡ್ ಕೋಚ್ ರಿಕಿ ಪಾಂಟಿಂಗ್, ಅಪಘಾತದ ಬಳಿಕ ರಿಷಭ್ ಪಂತ್ ಮಾಡಿರುವ ಕಮ್ಬ್ಯಾಕ್ನ ರೀತಿಯನ್ನು ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಎಂಎಸ್ ಧೋನಿ ಸಾಧನೆಯನ್ನು ರಿಷಭ್ ಪಂತ್ ಮೀರಿ ನಿಲ್ಲುತ್ತಾರೆಂದು ಭವಿಷ್ಯ ನುಡಿದಿದ್ದಾರೆ.
“ರಿಷಭ್ ಪಂತ್ ಆಟವನ್ನು ನಾವೆಲ್ಲಾ ಕಂಡಿದ್ದೇವೆ. ಸ್ಟಂಪ್ನ ಹಿಂಬದಿಯಲ್ಲಿನ ಅವರ ಕೆಲಸ, ಅವರ ಮಾರುಗಳನ್ನು ನಾವು ಸ್ಟಂಪ್ ಮೈಕ್ ಮೂಲಕ ಕೇಳಿಸಿಕೊಂಡಿದ್ದೇವೆ. ಅವರ ನುಡಿ ತಂಡದ ಆಟಗಾರರ ಉತ್ಸಾಹ ಹೆಚ್ಚಿಸುತ್ತದೆ. ಕ್ರಿಕೆಟ್ ಎಂದರೆ ಅವರಿಗೆ ಬಲು ಪ್ರೀತಿ. ಅದನ್ನೇ ಅವರು ಜೀವಿಸುತ್ತಿದ್ದಾರೆ. ಆತ ಅಪ್ಪಟ ವಿನ್ನರ್, ಅದನ್ನು ಹಲವು ಬಾರಿ ಸಾಬೀತು ಪಡಿಸಿದ್ದಾರೆ. ಕೆಲವೇ ರನ್ ಗಳಿಸಲು ಅವರು ಬ್ಯಾಟ್ ಮಾಡುವವರಲ್ಲ. ಪ್ರತಿ ರನ್ ಗಳಿಸುವುದನ್ನು ಆನಂದಿಸುತ್ತಾರೆ. ಈಗಾಗಲೇ ಅವರು ಟೆಸ್ಟ್ನಲ್ಲಿ 4-5 ಶತಕಗಳನ್ನು ಬಾರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ 90 ರನ್ಗೆ ವಿಕೆಟ್ ಕೈಚೆಲ್ಲಿದ್ದಾರೆ ಕೂಡ. ಅತ್ತ ಧೋನಿ ಬಹಳಷ್ಟು ಪಂದ್ಯಗಳನ್ನು ಆಡಿದ್ದಾರೆ.