ಲಕ್ನೋ: 9 ವರ್ಷದ ವಿದ್ಯಾರ್ಥಿನಿ ಆವರಣದಲ್ಲಿ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಸಾವಿಗೀಡಾಗಿದ್ದಾಳಶೆ ಎಂದು ಶಾಲೆಯ ಪ್ರಾಂಶುಪಾಲರು ಶನಿವಾರ ತಿಳಿಸಿದ್ದಾರೆ. ಗುರುವಾರ ಶಾಲೆಯ ಪ್ರಾಂಶುಪಾಲರು ನೀಡಿದ ಹೇಳಿಕೆಯ ಪ್ರಕಾರ, 3 ನೇ ತರಗತಿಯ ವಿದ್ಯಾರ್ಥಿನಿ ಮಾನ್ವಿ ಸಿಂಗ್ ಆಟದ ಮೈದಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾಳೆ ಎಂಬ ಮಾಹಿತಿ ಪಡೆದ ನಂತರ ಆಕೆಯನ್ನು ಹತ್ತಿರದ ಫಾತಿಮಾ ಆಸ್ಪತ್ರೆಗೆ ಸಾಗಿಸಲಾಯಿತು.
ಬಾಲಕಿಯ ಮನೆಯವರು ಆಕೆಯನ್ನು ಚಂದನ್ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಹೃದಯಾಘಾತದಿಂದ ಸಾವಿಗೀಡಾಗಿರುವುದಾಗಿ ತಿಳಿಸಿದ್ದಾರೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಈ ವಿಷಯ ಪೊಲೀಸರ ಗಮನಕ್ಕೂ ಬಂದಿದ್ದು, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಬಾಲಕಿಯ ಮನೆಯವರು ಹೇಳಿದ್ದಾರೆ. ಬಾಲಕಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಶಾಲೆಗೆ ರಜೆ ಘೋಷಿಸಲಾಗಿತ್ತು.
ಸ್ಥಳೀಯ ಆಸ್ಪತ್ರೆಯ ವೈದ್ಯರು ವಿದ್ಯಾರ್ಥಿಯನ್ನು “ಕೊನೆಯುಸಿರೆಳೆದಿರುವುದಾಗಿ” ಎಂದು ಹೇಳಿದ್ದು ಬಾಲಕಿಗೆ ಹೃದಯಾಘಾತವಾಗಿದೆ ಎಂದು ನಂಬಲಾಗಿದೆ. “ಲಿಖಿತಾ ಶೈಕ್ಷಣಿಕ ಅಧ್ಯಯನದಲ್ಲಿ ಸಕ್ರಿಯರಾಗಿದ್ದರು ಆದರೆ ವಾರ್ಷಿಕ ಸಾರ್ವಜನಿಕ ಪರೀಕ್ಷೆಗಳಿಗೆ ಸಂಬಂಧಿಸಿದ ಆತಂಕ ಮತ್ತು ಒತ್ತಡವು ಅವಳಿಗೆ ಹಾನಿಯನ್ನುಂಟುಮಾಡಿರಬಹುದು.