ಮಂಡ್ಯ:- ಸಿದ್ದರಾಮಯ್ಯ ನಾಯಕತ್ವ ಪ್ರಶ್ನೆ ಮಾಡುವ ಅರ್ಹತೆ ಕುಮಾರಸ್ವಾಮಿಗಿಲ್ಲ ಎಂದು ಚಲುವರಾಯಸ್ವಾಮಿ ಕಿಡಿಕಾರಿದರು.
ಈ ಸಂಬಂಧ ಮಾತನಾಡಿದ ಅವರು, ಕೇಂದ್ರ ಸಚಿವರಾದ ಹೆಚ್ಡಿ ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾದವರು. ಅವರ ಟೀಕೆ- ಟಿಪ್ಪಣೆಗಳನ್ನು ನೋಡುತ್ತಾ ಇರುತ್ತೀರಿ. ಒಬ್ಬ ಮಾಜಿ ಸಿಎಂ ಹೇಗೆ ಮಾತಾಡಬೇಕು ಎಂಬುದು ಅವರಿಗೆ ಗೊತ್ತಿಲ್ಲ. ಸಿದ್ದರಾಮಯ್ಯನವರ ಚರಿತ್ರೆ, ನಾಯಕತ್ವ, ಆಡಳಿತವನ್ನು ಪ್ರಶ್ನೆ ಮಾಡುವ ಅರ್ಹತೆ ಕುಮಾರಸ್ವಾಮಿಯವರಿಗೆ ಇಲ್ಲ.
ಗ್ರಾಮಗಳಲ್ಲೂ ನೂರಕ್ಕೆ ನೂರರಷ್ಟು 5 ಗ್ಯಾರೆಂಟಿ ನೀಡಲಾಗುತ್ತಿದೆ. ಅಲ್ಲಿ ಮುಸ್ಲಿಮರು, ಒಕ್ಕಲಿಗರು, ಬೇರೆ ಪಂಗಡದವರೂ ಅಂತ ಕೊಡುತ್ತಾ ಇದ್ದಾರಾ? ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ, ಆದರೆ ಪಕ್ಕದ ತಟ್ಟೆ ನೋಡ್ತಾರೆ. ಇದೆಲ್ಲಾ ಮಾತಾಡೋದಕ್ಕೆ ಅವಕಾಶ ಮಾಡಿ ಕೊಟ್ಟಿದ್ದೇ ನೀವು.
ಅದಕ್ಕೆ ಅವರು ಬಂದು ಮಾತಾಡ್ತಾ ಇದ್ದಾರೆ ಎಂದು ಕೃಷಿ ಸಚಿವ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಹೇಳಿದ್ದಾರೆ.