ಹುಬ್ಬಳ್ಳಿ: ಇಲ್ಲಿನ ಗೋಕುಲ್ ರಸ್ತೆಯ ಡೆನಿಸನ್ಸ್ ಹೋಟೆಲ್ನಲ್ಲಿ ಬೆಂಗಳೂರಿನ ಗೋಲ್ಡನ್ ಕ್ರೀಪರ್ ಸಂಸ್ಥೆ ವತಿಯಿಂದ 30ಕ್ಕೂ ಹೆಚ್ಚು ಆಭರಣ ತಯಾರಕರು ಸಿದ್ಧಪಡಿಸಿದ್ದ ‘ಆಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳ(ದಿ ಜ್ಯುವೆಲ್ಲರಿ ಷೋ)’ಕ್ಕೆ ಚಾಲನೆ ನೀಡಲಾಯಿತು.
ಶಾಸಕ ಮುನಿರತ್ನ ಅರೆಸ್ಟ್ ಕೇಸ್: ಇದೆಲ್ಲಾ ಗೃಹ ಸಚಿವರ ಪಿತೂರಿ ಎಂದ ಗೃಹ ಸಚಿವ!
ಮೂರು ದಿನ ನಡೆಯುವ ಮೇಳವನ್ನು ಸ್ನೇಹಾ ಪ್ರದೀಪ ಶೆಟ್ಟರ್ ಹಾಗೂ ಉಪಮೇಯರ್ ದುರ್ಗಮ್ಮ ಬಿಜವಾಡ ಉದ್ಘಾಟಿಸಿದರು. ‘ದಿ ಜ್ಯುವೇಲ್ಲರಿ ಷೋ’ ಹೆಸರಿನ ಭಾರತೀಯ ಒಡವೆಗಳ ಉತ್ಸವದಲ್ಲಿ 30 ಸಾವಿರಕ್ಕೂ ಅಧಿಕ ವಿನ್ಯಾಸದ ಆಭರಣಗಳು ಪ್ರದರ್ಶನಕ್ಕೆ ಹಾಗೂ ಖರೀದಿಗೆ ಲಭ್ಯವಿವೆ. ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ ಬಿ.ಎನ್. ಮತ್ತು ಹೇಮಲತಾ ಜಗದೀಶ್ ಆಯೋಜಿಸಿರುವ ಮೇಳದಲ್ಲಿ ನವನವೀನ ಮಾದರಿಯ ಆಭರಣಗಳ ಸಂಗ್ರಹವಿದೆ.
ವಿಶೇಷ ವಿನ್ಯಾಸಗಳನ್ನೊಳಗೊಂಡ ಬಿಐಎಸ್ ಹಾಲ್ ಮಾರ್ಕ್ ಆಭರಣಗಳು ಇವೆ. ವಜ್ರಾಭರಣಗಳು ಅಂತರರಾಷ್ಟ್ರೀಯ ಗುಣಮಟ್ಟದ ಜಿಐಎ/ ಐಜಿಐ ಪ್ರಮಾಣಿತ ಆಭರಣಗಳ ಬಗ್ಗೆ ಉಚಿತ ಮಾಹಿತಿ ಸಹ ದೊರೆಯುತ್ತಿದೆ. ಖರೀದಿದಾರರು ಹಳೇ ಚಿನ್ನ ಬದಲಾಯಿಸಿಕ್ಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಬೆಂಗಳೂರಿನ ಅನನ್ಯ ಜ್ಯುವೆಲ್ಲರಿ, ಬಿಎನ್ಆರ್ ಗೋಲ್ಡ್, ದವನಂ, ಗಜರಾಜ್, ನವರತನ್, ಪಿಎಂಜೆ, ಸಿಂಹ ಜ್ಯುವೆಲ್ಲರ್ಸ್, ಶ್ರೀಗಣೇಶ ಡೈಮೆಂಡ್ಸ್, ಆರ್ಟ್ ಇಂಡಿಯಾ, ವಂಡರ್ ಡೈಮೆಂಡ್ಸ್, ನೈನ್ ಜ್ಯುವೆಲ್ಲರ್ಸ್, ಭಗವಾನ್ ಶೇಟ್ಜೀ, ರೂಪಂ ಸಿಲ್ವರ್, ಸಿಲ್ವರ್ ಗ್ಯಾಲರಿ, ಸ್ಯಾಂಚೀಸ್, ಮೈ ಸಿಲ್ವರ್, ಪ್ಯಾಷನ್ ಜ್ಯುವೆಲ್ಲರಿ, ಸ್ರಸ್ವ, ನಿತ್ಯಾಸ್ (ವಿಶಾಖಪಟ್ಟಣಂ), ಅರ್ಹಮ್(ಕೋಲ್ಕತ), ಬಾಲಾಜಿ ಪಲ್ರ್ಸ್(ಚೆನೈ) ಮುಂತಾದ ಆಭರಣ ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿವೆ.