ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾತ್ರ ಮಾಡಲಿದೆ. ತಮ್ಮ ಸ್ವಾರ್ಥಕ್ಕಾಗಿ ನಿಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿರುವ ಪರಿವಾರದ ಪಕ್ಷಗಳ ಬಗ್ಗೆ ನೀವು ಜಾಗರೂಕರಾಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜಮ್ಮು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆ ದೋಡಾದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಚುನಾವಣೆಗಳು ಮೂರು ರಾಜವಂಶಗಳು ಮತ್ತು ಜಮ್ಮು ಮತ್ತು ಕಾಶ್ಮೀರದ ಯುವಕರ ನಡುವೆ ನಡೆಯುತ್ತಿದೆ.
ಕಾಂಗ್ರೆಸ್, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ ಈ ಮೂರು ಕುಟುಂಬಗಳು ಸೇರಿ ಮಾಡಿದ ಕೆಲಸ ಯಾವ ಪಾಪಕ್ಕಿಂತ ಕಡಿಮೆಯಿಲ್ಲ. ಈ ಮೂರು ಕುಟುಂಬಗಳು ಜಮ್ಮು ಮತ್ತು ಕಾಶ್ಮೀರವನ್ನು ವರ್ಷಗಳಿಂದ ನಾಶಮಾಡಲು ಕಾರಣವಾಗಿವೆ ಎಂದು ಕಿಡಿಕಾರಿದರು. ಇತ್ತೀಚಿನ ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಹೊಸ ಹಂತ ಬಂದಿದೆ. ಇದರ ಶ್ರೇಯಸ್ಸು ಇಲ್ಲಿನ ಯುವಕರಿಗೆ ಮಾತ್ರ ಸಲ್ಲುತ್ತದೆ. ಇಂದು ನಾನು ಜಮ್ಮು ಮತ್ತು ಕಾಶ್ಮೀರದ ಯುವಕರು, ಅದು ಗಂಡಾಗಿರಲಿ, ಹೆಣ್ಣಮಕ್ಕಳಾಗಿರಲಿ ಅವರ ಉತ್ಸಾಹವನ್ನು ಅಭಿನಂದಿಸುತ್ತೇನೆ ಎಂದರು.
ನಿಮ್ಮ ಕಣ್ಣುಗಳಲ್ಲೇ ಅಡಗಿದೆ ನಿಮ್ಮ ಆರೋಗ್ಯದ ಗುಟ್ಟು: ಕಣ್ಣಿನ ಮೇಲೆ ಮಧುಮೇಹದ ಪ್ರಭಾವವೇನು ಗೊತ್ತಾ..?
2000ದ ಬಳಿಕ ಇಲ್ಲಿ ಪಂಚಾಯ್ತಿ ಚುನಾವಣೆ ನಡೆದಿಲ್ಲ. ಬಿಡಿಸಿ ಚುನಾವಣೆಗಳು ಇಲ್ಲಿ ನಡೆದಿಲ್ಲ. ದಶಕಗಳಿಂದ ಸ್ವಜನಪಕ್ಷಪಾತವು ಇಲ್ಲಿನ ಮಕ್ಕಳು ಮತ್ತು ಭರವಸೆಯ ಯುವಕರನ್ನು ಮುಂದೆ ಬರಲು ಬಿಡಲಿಲ್ಲ. ಯುವಕರು ರಾಜಕೀಯಕ್ಕೆ ಬರುವುದು ಕುಟುಂಬದವರಿಗೆ ಇಷ್ಟವಿರಲಿಲ್ಲ. 2014ರಲ್ಲಿ ಬಿಜೆಪಿ ಸರ್ಕಾರಕ್ಕೆ ಬಂದ ನಂತರ,
ನಾನು ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರ ಹೊಸ ನಾಯಕತ್ವವನ್ನು ತರಲು ಪ್ರಯತ್ನಿಸಿದೆ. ನಂತರ 2018ರಲ್ಲಿ ಪಂಚಾಯತ್ ಚುನಾವಣೆಗಳು ನಡೆದವು. 2019ರಲ್ಲಿ ಬಿಡಿಸಿ ಚುನಾವಣೆಗಳು ನಡೆದವು ಮತ್ತು 2020 ರಲ್ಲಿ ಮೊದಲ ಬಾರಿಗೆ ಡಿಡಿಸಿ ಚುನಾವಣೆಗಳು ನಡೆದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವು ತಳಮಟ್ಟದವರೆಗೆ ತಲುಪಲು ಈ ಚುನಾವಣೆಗಳನ್ನು ನಡೆಸಲಾಯಿತು ಎಂದು ಹೇಳಿದರು.