ಕಾಮ ಕಸ್ತೂರಿ ಅಥವಾ ತುಳಸಿ ಬೀಜ ಎಂದೇ ಜನಪ್ರಿಯವಾಗಿರುವ ಪದಾರ್ಥವು ಸಾಕಷ್ಟು ಆರೋಗ್ಯ ಸಮಸ್ಯೆಯನ್ನು ತನ್ನ ಶಕ್ತಿಯುತ ಕಪ್ಪು ಬೀಜಗಳಿಂದ ಚಿಕಿತ್ಸೆ ನೀಡುತ್ತದೆ. ಈ ತುಳಸಿ ಬೀಜಗಳು ತೂಕವನ್ನು ಇಳಿಕೆ ಮಾಡಿಕೊಳ್ಳುವುದರಿಂದ ಹಿಡಿದು ಚರ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವವರೆಗೆ ಸಾಕಷ್ಟು ಉಪಯೋಗಗಳನ್ನು ಶತಮಾನಗಳಿಂದಲೂ ನೀಡುತ್ತಲೇ ಬಂದಿದೆ.
ಕಾಮ ಕಸ್ತೂರಿ ಬೀಜ ಪೌಷ್ಟಿಕ ಸತ್ವಗಳು
ತುಳಸಿ ಅಥವಾ ಕಾಮ ಕಸ್ತೂರಿ ಬೀಜಗಳು ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅವುಗಳು ಸೌಮ್ಯವಾದ ತುಳಸಿ ಪರಿಮಳವನ್ನು ಹೊಂದಿದ್ದು, ಒಮೆಗಾ 3, ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳಿಂದ ಶ್ರೀಮಂತವಾಗಿದೆ.
ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ
- ಪದೇ ಪದೇ ಹಸಿವನ್ನು ಈ ತುಳಸಿ ಬೀಜಗಳು ತಡೆಯುತ್ತದೆ.
- ಹೊಟ್ಟೆ ತುಂಬಿಸಿದ ಅನುಭವವನ್ನು ಉಂಟು ಮಾಡುತ್ತದೆ.
- ಅಲ್ಲದೆ, ಇದು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ.
- ಇದರ ಪರಿಣಾಮ ನೀವು ತೂಕವನ್ನು ವೇಗವಾಗಿ ಕಳೆದುಕೊಳ್ಳಬಹುದು.
- ಇಷ್ಟೇ ಅಲ್ಲ, ಇದು ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ನಿಮ್ಮ ಡಯಟ್ ಚಾರ್ಟ್ ನಲ್ಲಿ ಸೇರಿಸುವುದನ್ನು ಮರೆಯಬೇಡಿ.
- ರಾತ್ರಿಯ ವೇಳೆ ಒಂದು ಲೋಟ ನೀರಿಗೆ ಒಂದು ಚಮಚ ತುಳಸಿ ಬೀಜವನ್ನು ನೆನಸಿ ಮರುದಿನ ಕುಡಿಯಿರಿ.
- ಹೀಗೆ ನಿಯಮಿತವಾಗಿ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ತೂಕ ಇಳಿಕೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.
ಎಳನೀರು ಆರೋಗ್ಯಕ್ಕೆ ಭಾರೀ ಪ್ರಯೋಜನಕಾರಿ. ಇದು ತುಂಬಾ ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು,ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಜೊತೆಗೆ ಇದು ಚಯಾಪಚಯವನ್ನು ಹೆಚ್ಚಿಸುತ್ತದೆ ಇನ್ನು ತೂಕ ಇಳಿಕೆಗೆ ಕೂಡ ಎಳನೀರು ಬಹಳ ಪ್ರಯೋಜಕ.
ಏಕೆಂದರೆ ಎಳನೀರು ಎಲೆಕ್ಟ್ರೋಲೈಟ್ʼಗಳಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ದೇಹದಲ್ಲಿ ನೀರಿನ ಕೊರತೆಯಾಗುವುದಿಲ್ಲ. ಈ ನೀರನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದಲ್ಲದೆ, ದೇಹದಿಂದ ಹಲವಾರು ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಎಳನೀರಲ್ಲಿ ಬಹಳ ಕಡಿಮೆ ಕ್ಯಾಲೋರಿಗಳಿರುತ್ತವೆ. ಇದನ್ನು ಕುಡಿಯುವುದರಿಂದ ದೇಹಕ್ಕೆ ಅದ್ಭುತವಾದ ಶಕ್ತಿ ದೊರೆಯುತ್ತದೆ. ಅದಕ್ಕಾಗಿಯೇ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ.
ಎಳನೀರನ್ನು ಸೇವಿಸುವುದರಿಂದ ದೇಹವು ತೇವಾಂಶದಿಂದ ಕೂಡಿರುತ್ತದೆ. ಇದರಲ್ಲಿ ಎಲೆಕ್ಟ್ರೋಲೈಟ್ʼಗಳು ಕಂಡುಬರುವ ಹಿನ್ನೆಲೆಯಲ್ಲಿ ತೂಕ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನು ಆರೋಗ್ಯ ತಜ್ಞರ ಪ್ರಕಾರ, ವ್ಯಾಯಾಮದ ಮೊದಲು ಅಥವಾ ನಂತರ ಎಳನೀರನ್ನು ಕುಡಿದರೆ ಶೀಘ್ರ ಸಮಯದಲ್ಲಿ ತೂಕ ಇಳಿಸಬಹುದು.
ಅತಿಯಾಗಿ ತಿನ್ನುವುದರಿಂದ ತೂಕವು ವೇಗವಾಗಿ ಹೆಚ್ಚಾಗುತ್ತದೆ. ಹೀಗಿರುವಾಗ, ಎಳನೀರು ಸೂಕ್ತ. ಇದಕ್ಕೆ ಒಂದು ಚಮಚ ಜೀರಿಗೆ ಅಥವಾ ಒಂದೆರಡು ಚಮಚ ನಿಂಬೆ ರಸ ಬೆರೆಸಿ ಕುಡಿಯಬೇಕು. ಈ ಸಲಹೆ ನಿಮ್ಮ ತೂಕವನ್ನು ಶೀಘ್ರದಲ್ಲೇ ಇಳಿಕೆಯಾಗುವಂತೆ ಮಾಡುತ್ತದೆ.
ತೂಕ ಇಳಿಸಿಕೊಳ್ಳಲು ಬಯಸಿದರೆ, ಕೊಬ್ಬಿನ ಚಯಾಪಚಯವು ಉತ್ತಮವಾಗಿರಬೇಕು. ಎಳನೀರಿನಲ್ಲಿ ಇರುವ ಸಂಯುಕ್ತಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಕ್ಕೆ ಕಾಮಕಸ್ತೂರಿ ಬೀಜವನ್ನು ಬೆರೆಸಿ ಕುಡಿದರೆ ದೇಹದಲ್ಲಿರುವ ಹೆಚ್ಚಿನ ಕ್ಯಾಲೊರಿಗಳನ್ನು ಸುಡುತ್ತದೆ ಮತ್ತು ತೂಕವನ್ನು ವೇಗವಾಗಿ ಕಡಿಮೆ ಮಾಡುತ್ತದೆ.
ಎಳನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಇದರೊಂದಿಗೆ, ಆಹಾರವು ಉತ್ತಮವಾಗಿರುತ್ತದೆ. ದೇಹವು ಎಲ್ಲಾ ಅಗತ್ಯ ಅಂಶಗಳನ್ನು ಪಡೆಯುತ್ತದೆ. ಇನ್ನು ಹೆಚ್ಚುವರಿ ಕೊಬ್ಬನ್ನು ಸಂಗ್ರಹಿಸಲು ಇದು ಬಿಡುವುದಿಲ್ಲ.
ಎಳನೀರು ಪೋಷಕಾಂಶಗಳ ಖಜಾನೆ. ಮೆಗ್ನೀಸಿಯಮ್, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ನಂತಹ ಅಗತ್ಯ ಪೋಷಕಾಂಶಗಳನ್ನು ಒಳಗೊಂಡಿದೆ. ಇವೆಲ್ಲವೂ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಇದು ಚಯಾಪಚಯವನ್ನು ಸುಧಾರಿಸುವುದಲ್ಲದೆ, ಕೊಬ್ಬನ್ನು ಸುಲಭವಾಗಿ ತೆಗೆದುಹಾಕುತ್ತದೆ.