ಬೆಂಗಳೂರು:- ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರವು, ಶೀಘ್ರವೇ ಹಾಲಿನ ದರ ಹೆಚ್ಚಿಸುವ ಸಾಧ್ಯತೆ ಇದೆ. ಹಾಲಿನ ದರ ಹೆಚ್ಚಿಸುವ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸುಳಿವು ನೀಡಿದ್ದಾರೆ.
ರಾತ್ರಿ ಮಲಗುವಾಗ ಈ ಕರಿ ಕಾಳನ್ನು ಬಾಯಲ್ಲಿಟ್ಟುಕೊಂಡರೆ ನಾರ್ಮಲ್ ಆಗತ್ತೆ ಬ್ಲಡ್ ಶುಗರ್!
ಇದೇ ವರ್ಷದ ಜೂನ್ ತಿಂಗಳಲ್ಲಿ ಪ್ರತಿ ಲೀಟರಿಗೆ 2 ರೂ. ಹೆಚ್ಚಿಸಲಾಗಿತ್ತು. ಇದೀಗ ನಂದಿನಿ ಹಾಲಿನ ಉತ್ಪನ್ನಗಳ ದರ ಮತ್ತೊಮ್ಮೆ ಪರಿಷ್ಕರಿಸಲು ನಿರ್ಧರಿಸಿದೆ. ಹಾಲಿನ ದರವನ್ನ ಹೆಚ್ಚಿಸುವ ಬಗ್ಗೆ ಖುದ್ದು ಸಿಎಂ ಅವರೇ ಸುಳಿವು ನೀಡಿದ್ದು ಮಧ್ಯಮ ವರ್ಗವನ್ನ ದಿಗಿಲು ಹುಟ್ಟಿಸಿದೆ.
ನಂದಿನ ಹಾಲಿನ ದರ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಯಥಾ ಪ್ರಕಾರ ಮತ್ತೆ ಹಳೇ ಡೈಲಾಗ್ ಹೊಡೆದ ಸಿಎಂ, ಜೆಡಿಎಸ್ ಟೀಕಿಸುತ್ತಾ ಹೆಚ್ಚಳ ಮಾಡುವ ದರ ರೈತರಿಗೆ ವರ್ಗಾಯಿಸುವ ಮಾತುಗಳನ್ನಾಡಿದ್ದಾರೆ.