ವಿಜಯಪುರ:- ನಾಗಮಂಗಲದ ಗಲಾಟೆ ವಿಚಾರವಾಗಿ ಸಂಸದ ರಮೇಶ ಜಿಗಜಿಣಗಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಗಲಾಟೆ ಯಾಕೆ ಆಗಿದೆ ಎಂಬುದು ಎಲ್ಲಿರಿಗೂ ಗೊತ್ತಿದೆ. ನಾವು ಏನಾದರೂ ಹೇಳಿದರೆ ಜಾತಿವಾದಿ ಪಕ್ಷದವನು ಇದ್ದಾನೆ ಹೇಳುತ್ತಾನೆ ಅಂತೀರಾ. ಇಲ್ಲಿ ಸರಳವಾಗಿ ಕಾಣುತ್ತದೆ, ಇದು ಪ್ರಚೋದನೆ ಇಲ್ಲದೆ ಆಗಲ್ಲ.
ಮುಂಬುರುವ ದಿನಗಳಲ್ಲಿ ಬೇರೆ ಬೇರೆ ಭಾಗದಲ್ಲಿ ಆಗಬಹುದು. ಅದರ ಹಿಂದೆ ನಮ್ಮಂತ ರಾಜಕಾರಣಿಗಳು ಇರಬಹುದು ಎಂದರು.
ನಾನೇ ಸಿಎಂ ಆಗಿ ಮುಂದೆ ವರೆಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಪ್ರಧಾನಿ ಆಗಬೇಕು ಎಂಬ ಆಸೆ ಇರತ್ತೆ ಆಗತ್ತಾ. ಒಂದೆರಡು ದಿನ ಕಾಯಿರಿ ಸಿದ್ದರಾಮಯ್ಯ ಸಿಎಂ ಸ್ಥಾನದ ಕುರಿತು ನೋಡಿ ಎಂದರು. ರಾಜ್ಯದಲ್ಲಿ ದಲಿತ ಸಿಎಂ ಬೇಡಿಕೆ ವಿಚಾರವಾಗಿ ಮಾತನಾಡಿ, ನಾನು ಸಾಯೋ ವರೆಗೂ ಈ ಬೇಡಿಕೆ ಇಡುತ್ತೇನೆ. ನಾವೇನು ಪಾಪಿಸ್ಟರ್, ರಾಜ್ಯದಲ್ಲಿ ದಲಿತ ಸಿಎಂ ಆಗಲೇ ಬೇಕು.
ದಲಿತರು ಏನು ಅಯೋಗ್ಯರಾ, ಯಾವುದೇ ಪಕ್ಷವಾಗಲಿ,ದಲಿತಸಿಎಂ ಆಗಲೇಬೇಕು. ನೆರ ಹೊರೆಯ ರಾಜ್ಯದಲ್ಲಿ ದಲಿತರು ಸಿಎಂ ಆಗಿದ್ದಾರೆ. ಕರ್ನಾಟಕದಲ್ಲಿರುವ ದಲಿತರು ಪಾಪಿಸ್ಟರಾ ಎಂದ ಸಂಸದ ರಮೇಶ ಜಿಗಜಿಣಗಿ ಆಕ್ರೋಶ ಹೊರ ಹಾಕಿದ್ದಾರೆ.