ಬೆಂಗಳೂರು:- ನಾಗಮಂಗಲ ಗಲಭೆ ಕೇಸ್ ಗೆ ಸಂಬಧಪಟ್ಟಂತೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಲಿ ಎಂದು ಪರಿಷತ್ ಸದಸ್ಯ ರವಿಕುಮಾರ್ ಒತ್ತಾಯ ಮಾಡಿದ್ದಾರೆ.
ಮಗಳಿಂದಲೇ ತಾಯಿ ಕೊಲೆ ಕೇಸ್: ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮ ಹೇಳಿದಿಷ್ಟು!
ಸಿದ್ದರಾಮಯ್ಯ ಸರ್ಕಾರ ಜಾತ್ಯತೀತ ಸರ್ಕಾರ ಎಂದು ಹೇಳುತ್ತೆ, ಸಮಾಜವಾದಿ ಸರ್ಕಾರ ಅಂತ ಹೆಸರಿಗೆ ಮಾತ್ರ ಬಡಬಡಾಯಿಸುತ್ತೆ. ಈ ಸರ್ಕಾರ ಹಿಂದೂಗಳನ್ನ ಹತ್ತಿಕ್ಕುವ ಸರ್ಕಾರ. ನಾಗಮಂಗಲದಲ್ಲಿ ಮುಸ್ಲಿಮರೇ ಕಲ್ಲು ಹೊಡೆದಿದ್ದಾರೆ. ಲಾಂಗ್ ಬೀಸಿದ್ದಾರೆ. ಪೆಟ್ರೋಲ್ ಬಾಂಬ್ ಹಾಕಿದ್ದಾರೆ. ಮಸೀದಿಯಲ್ಲಿ ಇವೆಲ್ಲ ಹೇಗೆ ಬಂತು ಎಂದು ಪ್ರಶ್ನಿಸಿದರು.
ಅವರು 40 ಅಂಗಡಿಗಳಿಗೆ ಬೆಂಕಿ ಹಾಕಿದ್ದಾರೆ. ಅನೇಕ ಅಂಗಡಿಗಳು ದರೋಡೆ ಆಗಿವೆ. ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಹಿಂದೂಗಳಿಗೆ ರಕ್ಷಣೆ ಕೊಡದ ಮುಸ್ಲಿಮರನ್ನು ಓಲೈಕೆ ಮಾಡಲು ಈ ಸರ್ಕಾರ ಮುಂದಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಸಿಎಂ ಸಿದ್ದರಾಮಯ್ಯ ಇದರ ಬಗ್ಗೆ ಇದೂವರೆಗೂ ಮಾತಾಡಿಲ್ಲ. ಪರಮೇಶ್ವರ್ (G Parameshwar) ಸಣ್ಣ ಘಟನೆ ಅಂತಾರೆ. ಈಗ ಹಿಂದೂಗಳನ್ನ ಆರೋಪಿಗಳಾಗಿ ಮಾಡಿದ್ದಾರೆ. ಈ ಘಟನೆ ಆಗಲು ಮುಸ್ಲಿಮರು ಕಾರಣ. ಕಲ್ಲು ಎಸೆದವರು, ಪೆಟ್ರೋಲ್ ಬಾಂಬ್ ಹಾಕಿದವರು ಮುಸ್ಲಿಮರು. ಆದರೆ ಅವರ ಮೇಲೆ ಕೇಸ್ ಹಾಕದೇ ಹಿಂದೂಗಳನ್ನ ಪ್ರಮುಖ ಆರೋಪಿಯಾಗಿ ಮಾಡಿದ್ದಾರೆ ಎಂದು ಹರಿಹಾಯ್ದರು.
ಕಲ್ಲು ಎಸೆದವರ ಮೇಲೆ ಕೇಸ್ ಮಾಡಬೇಕಿತ್ತು. ಈ ಸರ್ಕಾರಕ್ಕೆ ನಾಚಿಕೆ ಮಾನ ಮರ್ಯಾದೆ ಇಲ್ಲ. ಸರ್ಕಾರದ ನಡೆ ನುಡಿ ಬಗ್ಗೆ ಕೂಡಲೇ ರಾಜ್ಯಪಾಲರು ಮಧ್ಯ ಪ್ರವೇಶ ಮಾಡಬೇಕು. ಬಿಜೆಪಿ ಈಗ ಸತ್ಯಶೋಧನ ಸಮಿತಿ ರಚನೆ ಮಾಡಿದೆ. ಹಿಂದೂಗಳಿಗೆ ಈ ಸರ್ಕಾರ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.