ಬೆಂಗಳೂರು:- ವಿಪಕ್ಷ ನಾಯಕರ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.
Hubballi: ವಿಶೇಷ ಆಭರಣ ಪ್ರದರ್ಶನಕ್ಕೆ ಮಹಾಪೌರ ರಾಮಣ್ಣ ಬಡಿಗೇರ ಶಿಲ್ಪಾ ಶೆಟ್ಟರ ಚಾಲನೆ!
ಈ ಸಂಬಂಧ ಮಾತನಾಡಿದ ಅವರು,ಮುಡಾ ಪ್ರಕರಣದ ಮುಂಚೆಯೇ ಹಳೇ ಕೇಸ್ಗಳ ತನಿಖೆ ನಡೆಯುತ್ತಿದೆ. ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ. ಯಾವುದನ್ನೂ ನಾವು ಸುಮ್ಮನೆ ಬಿಡಲ್ಲ. ಬಂದು ಗತಿ ಕಾಣಿಸುತ್ತೇವೆ ಎಂದು ಹೇಳಿದ್ದಾರೆ.
ವಿಪಕ್ಷ ನಾಯಕರ ವಿರುದ್ಧ ನಾವು ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಗುಪ್ತಚರಕ್ಕೆ ನಿಂಬಾಳ್ಕರ್ ವರ್ಗಾವಣೆ ವಿಚಾರವಾಗಿ ಮಾತನಾಡಿದ್ದು, ಅದು ಮುಖ್ಯಮಂತ್ರಿಗಳ ತೀರ್ಮಾನ. ಯಾರ ಮೇಲೆ ಆತ್ಮವಿಶ್ವಾಸ ಇದೆ ಅವನ್ನು ಮಾಡಿರುತ್ತಾರೆ.
ಮುಖ್ಯಮಂತ್ರಿಗಳ ಬಳಿಯೇ ಗುಪ್ತಚರ ಇದೆ. ನನ್ನ ಬಳಿಯೂ ಚರ್ಚೆ ಮಾಡಿದ್ದರು ಎಂದಿದ್ದಾರೆ.