ಭಾರತ ವನಿತೆಯರು ಈ ಬಾರಿ ಟಿ20 ವಿಶ್ವಕಪ್ ಗೆಲ್ಲುವ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆದ್ದರಿಂದ ಅವರ ಮೇಲಿನ ಒತ್ತಡವು ಹೆಚ್ಚಾಗುವ ಸಾಧ್ಯತೆಯಿದೆ. ಇದರ ಬೆನ್ನಲ್ಲೇ ಅಂಡರ್-19 ಟಿ20 ಏಷ್ಯಾಕಪ್ ಆಯೋಜಿಸುವುದಾಗಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥ ಜಯ್ ಶಾ ಘೋಷಿಸಿದ್ದಾರೆ. ಮಲೇಷ್ಯಾದಲ್ಲಿ ನಡೆದ ಎಸಿಸಿ ಸಭೆಯಲ್ಲಿ ಟೂರ್ನಿ ಆಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.
ರೈತ ಸಮುದಾಯಕ್ಕೆ ಗುಡ್ ನ್ಯೂಸ್: ಮಿನಿ ಟ್ರ್ಯಾಕ್ಟರ್ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!
ಏಷ್ಯಾದ ಮಹಿಳಾ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಬೇಕು. ಈ ನಿಟ್ಟಿನಲ್ಲಿ ಅವರಿಗೆ ಅಂಡರ್ -19 ಟೂರ್ನಿ ಮೂಲಕ ಉತ್ತಮ ವೇದಿಕೆ ಒದಗಿಸಿಕೊಡುತ್ತೇವೆ ಎಂದು ಶಾ ತಿಳಿಸಿದ್ದಾರೆ. ಪ್ರತಿ ಬಾರಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಅಂಡರ್-19 ಟಿ20 ಏಷ್ಯಾಕಪ್ ನಡೆಸಲು ಎಸಿಸಿ ನಿರ್ಧರಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಈಗಾಗಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರುಷ ಹಾಗೂ ಮಹಿಳೆಯರ ಏಷ್ಯಾಕಪ್, ಪುರುಷರ ಏಷ್ಯಾಕಪ್ ಆಯೋಜಿಸುತ್ತಿದೆ.