ಕಲಬುರಗಿ:- ಲೋಕಾಯುಕ್ತ ಅಧಿಕಾರಿಗಳು ಕಾರ್ಯಚರಣೆ ಮಾಡಿ ಅಡುಗೆ ಸಹಾಯಕರಿಗೆ ತಿಂಗಳ ಹಾಜರಾತಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾಸ್ಟೆಲ್ ವಾರ್ಡನ್ ಲೋಕಾ ಅಧಿಕಾರಿಗಳ ದಾಳಿಗೆ ಬಿದ್ದಿದ್ದಾರೆ.
ನಾಗಮಂಗಲ ಗಲಭೆ ಕೇಸ್: ಸಿಸಿಟಿವಿ ದೃಶ್ಯ ಆಧರಿಸಿ ಉಳಿದ ಆರೋಪಿಗಳಿಗಾಗಿ ಶೋಧ!
ಈ ಘಟನೆ ಕಲಬುರಗಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಜರುಗಿದೆ. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಹಾಸ್ಟೆಲ್ ವಾರ್ಡನ್ ಶಿವಶರಣಪ್ಪ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ವಾರ್ಡನ್ ಶಿವಶರಣಪ್ಪ ಅವರು, ಅಡುಗೆ ಸಹಾಯಕ ಶ್ರೀಮಂತ ಬಳಿ ತಿಂಗಳ ಹಾಜರಾತಿ ನೀಡಲು 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ಕಚೇರಿಯಲ್ಲಿ 15 ಸಾವಿರ ಮುಂಗಡ ಹಣ ಪಡೆಯುವಾಗ ರೆಡ್ಹ್ಯಾಂಡ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.