ಬೆಂಗಳೂರು:- ನಮಗೆ ಯಾರ ತುಷ್ಟೀಕರಣ ಅಗತ್ಯ ಇಲ್ಲ, ಮಾಡುವುದೂ ಇಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮ ಮೆಟ್ರೋದಲ್ಲಿ ಪ್ಯಾನಿಕ್ ಬಟನ್ ಒತ್ತಿದ 23 ವರ್ಷದ ಯುವಕನಿಗೆ ಬಿತ್ತು ಭಾರೀ ದಂಡ!
ನೆಲಮಂಗಲ ಗಲಭೆ ಕೇಸ್ ಗೆ ಮಾತನಾಡಿದ ಅವರು, ಯಾರೇ ಈ ಥರ ಘಟನೆಗೆ ಕಾರಣವಾದ್ದರೂ ಶಿಕ್ಷೆ ಆಗಬೇಕು. ಇಂಥ ಘಟನೆ ಆಗಲು ಬಿಡಬಾರದು. ಘರ್ಷಣೆ ಹಿಂಸೆಗಳಿಂದ ಯಾರಿಗೂ ಲಾಭವಿಲ್ಲ. ಯಾರ ತುಷ್ಟೀಕರಣವೂ ಇಲ್ಲ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಆಗಬೇಕು. ಕಾಂಪ್ರಮೈಸ್ ಆಗಬಾರದು ಎಂದು ತಿಳಿಸಿದ್ದಾರೆ.
ಯಾರೇ ಈ ಥರ ಘಟನೆಗೆ ಕಾರಣವಾದ್ದರೂ ಶಿಕ್ಷೆ ಆಗಬೇಕು. ಇಂಥ ಘಟನೆ ಆಗಲು ಬಿಡಬಾರದು. ಘರ್ಷಣೆ ಹಿಂಸೆಗಳಿಂದ ಯಾರಿಗೂ ಲಾಭವಿಲ್ಲ. ಯಾರ ತುಷ್ಟೀಕರಣವೂ ಇಲ್ಲ. ಯಾರೇ ತಪ್ಪು ಮಾಡಿದರೂ ಕೂಡ ಕ್ರಮ ಆಗಬೇಕು. ಕಾಂಪ್ರಮೈಸ್ ಆಗಬಾರದು ಎಂದು ತಿಳಿಸಿದ್ದಾರೆ.
ಪೊಲೀಸರೂ ಕೂಡ ಸ್ಪಷ್ಟವಾಗಿ ನೋಡಬೇಕಾಗುತ್ತದೆ. ಎಲ್ಲವನ್ನೂ ಕೂಡ ತನಿಖೆ ಮಾಡಬೇಕಾಗುತ್ತದೆ. ಪ್ರಚೋದನಕಾರಿ ಮಾತುಗಳು ಬೇಡ. ಲಕ್ಷಾಂತರ ಗಣಪತಿ ಕೂರಿಸ್ತಾರೆ. ಶೋಭಾ ಕರಂದ್ಲಾಜೆಯದ್ದೂ ಯಾವಾಗಲೂ ಇದೇ ಕಥೆ. ಬೆಂಕಿ ಹಚ್ಚುವುದರಲ್ಲಿ ಅವರೇ ಮುಂಚೂಣಿಯಲ್ಲಿರ್ತಾರೆ ಅಲ್ವ ಎಂದು ಕುಟುಕಿದ್ದಾರೆ.
ಕೋಮು ವೈಷಮ್ಯ ಹೆಚ್ಚು ಮಾಡುವುದಕ್ಕೇ ಬಿಜೆಪಿ ಇರುವುದು. ಬೇರೆ ಪ್ರಕರಣ ಆದರೆ ಬಿಜೆಪಿ ತಲೆ ಕೆಡಿಸಿಕೊಳ್ಳಲ್ಲ. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಬಿಜೆಪಿ ಮಾಡುತ್ತದೆ. ಎಲ್ಲ ಕಾಲದಲ್ಲಿ ಕೂಡ ಘಟನೆಗಳಾಗಿವೆ. ಸುಮ್ಮನೆ ಸುಳ್ಳು ಹೇಳುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ