ಇಲಿಯನ್ನು ಸಾಯಿಸಿದ ಆರೋಪದ ಮೇರೆಗೆ ಮಹಿಳೆಯೊಬ್ಬರ ವಿರುದ್ಧ ಎಫ್.ಐ.ಆರ್ ದಾಖಲಿಸಲಾಗಿದೆ. ಹೌದು ಈ ಮಹಿಳೆ ಜೀವಂತ ಇಲಿಯನ್ನು ದಾರಕ್ಕೆ ಕಟ್ಟಿ ಅದನ್ನು ಬೀದಿ ನಾಯಿಗೆ ತಿನ್ನಿಸಿದ್ದು, ಇದರಿಂದ ಕೋಪಗೊಂಡ ಪ್ರಾಣಿಪ್ರಿಯರೊಬ್ಬರು ಇಲಿಯನ್ನು ಕೊಂದ ಹೆಂಗಸಿನ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಸಂತೋಷ ಲಾಡ್ ತವರಿನಲ್ಲೇ ಕಳ್ಳತನ: ಮಕ್ಕಳಿಗೆ ನೀಡಬೇಕಾಗಿದ್ದ ಲ್ಯಾಪ್ ಟಾಪ್ ಕದ್ದ ಖದೀಮರು
ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ನಡೆದಿದ್ದು, ಕ್ರೂರವಾಗಿ ಇಲಿಯನ್ನು ಸಾಯಿಸಿದ ಮಹಿಳೆಯ ವಿರುದ್ಧ ಪ್ರಾಣಿಪ್ರಿಯರೊಬ್ಬರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಮಹಿಳೆ ಜೀವಂತ ಇಲಿಯನ್ನು ಹಿಡಿದು, ಅದರ ಬಾಲವನ್ನು ದಾರಕ್ಕೆ ಕಟ್ಟಿ ನಂತರ ಅದನ್ನು ಬೀದಿನಾಯಿಗೆ ತಿನ್ನಿಸಿದ್ದಾರೆ
ದೃಶ್ಯವನ್ನು ಯಾರೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ದೃಶ್ಯ ಪ್ರಾಣಿ ಪ್ರಿಯ ಹಾಗೂ ಪ್ರಾಣಿ ಹಕ್ಕುಗಳ ಕಾರ್ಯಕರ್ತ ವಿಕೇಂದ್ರ ಶರ್ಮಾ ಅವರ ಕಣ್ಣಿಗೆ ಬಿದ್ದಿದ್ದು, ಮಹಿಳೆಯ ಈ ವರ್ತನೆಯಿಂದ ಕೋಪಗೊಂಡ ಅವರು ಬದೌನ್ ನಗರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಅಲ್ಲದೆ ಆಕೆ ಪ್ರತಿದಿನ ಹೀಗೆ ಇಲಿಗಳನ್ನು ಸಾಯಿಸಿ ನಾಯಿಗೆ ತಿನ್ನಿಸುತ್ತಿದ್ದಾರೆ ಎಂದೂ ಆರೋಪಿಸಿದ್ದಾರೆ.
ಮೊದಲು ಈ ದೂರನ್ನು ಸ್ವೀಕರಿಸದ ಪೊಲೀಸರು ನಂತರ ವಿಕೇಂದ್ರ ಅವರು ತೋರಿಸಿದ ಸಾಕ್ಷಿಯ ಆಧಾರದ ಮೇಲೆ ಮುಗ್ಧ ಜೀವಿಯ ಮೇಲೆ ಕ್ರೌರ್ಯ ತೋರಿ ಅದನ್ನು ಸಾಯಿಸಿದ ಆ ಮಹಿಳೆಯ ವಿರುದ್ಧ ಸೆಕ್ಷನ್ 325 ಮತ್ತು ಸೆಕ್ಷನ್ 11 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರು ಸ್ವೀಕರಿಸಲಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಯುತ್ತಿದೆ.