ಬೆಂಗಳೂರು:- ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಸಲ್ಲಿಸಿರುವ ಚಾರ್ಜ್ಶೀಟ್ ನಲ್ಲಿ ರಾಜ್ಯ ಬಿಜೆಪಿ ಕಚೇರಿ ಮೇಲೂ ಉಗ್ರರಿಂದ ವಿಫಲ ಬಾಂಬ್ ದಾಳಿ ಯತ್ನ ನಡೆದಿತ್ತು ಅನ್ನೋ ಮಾಹಿತಿ ಬಯಲಾಗಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಸೂಚನೆ ಮೇರೆಗೆ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಭದ್ರತೆ ಇನ್ನಷ್ಟು ಹೆಚ್ಚಳ ಮಾಡಲಾಗಿದೆ.
Muda Scam: ಸಿದ್ದರಾಮಯ್ಯಗೆ ನಾಳೆ ಮುಡಾ ಭವಿಷ್ಯ: ಹೈಕೋರ್ಟ್ ನಲ್ಲಿ ತೀರ್ಪು ಸಾಧ್ಯತೆ!
ಮೆಟಲ್ ಡಿಟೆಕ್ಟರ್, ಬಿಗಿ ತಪಾಸಣೆ, ಹೆಚ್ಚುವರಿಯಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಬಿಜೆಪಿ ಕಚೇರಿ ಪ್ರವೇಶಿಸುವವರು ಈ ಮೆಟಲ್ ಡಿಟೆಕ್ಟರ್ ಮೂಲಕವೇ ಪ್ರವೇಶಿಸುವಂತೆ ಸೂಚಿಸಲಾಗಿದೆ. ಜೊತೆಗೆ ನಿತ್ಯ ಮಲ್ಲೇಶ್ವರ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ನಿಗಾ ವಹಿಸುವಂತೆಯೂ ಸೂಚಿಸಲಾಗಿದೆ.
ಇನ್ನು, ರಾಜ್ಯ ಬಿಜೆಪಿ ಕಚೇರಿಯನ್ನೂ ಉಗ್ರರು ಟಾರ್ಗೆಟ್ ಮಾಡಿದ್ರು ಅನ್ನೋ ವಿಚಾರ ಈಗ ಆತಂಕ ಸೃಷ್ಟಿಸಿದೆ. ಜನವರಿ 22 ರಂದು ಇಡೀ ದೇಶ ಅಯೋಧ್ಯೃ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಂಭ್ರಮದಲ್ಲಿ ಮುಳುಗಿ ಹೋಗಿತ್ತು.
ಕೆಫೆ ಬ್ಲಾಸ್ಡ್ ಆರೋಪಿಗಳು ಹಾಕಿದ್ದ ಸ್ಕೆಚ್ ಪ್ರಕಾರ ಅದೇ ಅಯೋಧ್ಯೆ ಪ್ರಾಣ ಪ್ರತಿಷ್ಠೆಯ ದಿನವೇ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಬಾಂಬ್ ಇಡಲು ಸಂಚು ರೂಪಿಸಲಾಗಿತ್ತು. ಬಿಜೆಪಿ ಕಚೇರಿಗೆ ಬಾಂಬ್ ಇಡುವ ಯತ್ನ ಫೇಲ್ ಆಗಿದ್ದೇ ತಡ ಆರೋಪಿಗಳು ರಾಮೇಶ್ವರಂ ಕೆಫೆಗೆ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.