ಬೆಂಗಳೂರು:- ಹೇಳೋದು ಸಮಾಜ ಸೇವೆ, ಆದ್ರೆ ಈತ ಮಾಡಿದ್ದೇನು. ಛೇ 60 ವರ್ಷದ ವೃದ್ಧೆಯನ್ನು ಬಿಟ್ಟಿಲ್ಲ ಅಂದ್ರೆ ಈತ ಎಂಥಾ ಕಾಮುಕ ಇರಬೇಕು ಹೇಳಿ. ಎಸ್ ನಾವೀಗ ಹೇಳಲು ಹೊರಟಿರೋದು ಪ್ರಜ್ವಲ್ ರೇವಣ್ಣ ಬಗ್ಗೆ.
ಪಳಪಳ ಹೊಳೆಯುವ ಮುಖ ನಿಮ್ಮದಾಗಬೇಕಾ!? ಅಡುಗೆ ಮನೆಯಲ್ಲಿದೆ ಸೌಂದರ್ಯದ ಗುಟ್ಟು!
42ನೇ ಎಸಿಎಂಎಂ ಜನಪ್ರತಿನಿಧಿ ಕೋರ್ಟ್ಗೆ ಎಸ್ಐಟಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ 113 ಸಾಕ್ಷಿಗಳು, ಡಿಜಿಟಲ್ ಎವಿಡೆನ್ಸ್, ಸಾಂದರ್ಭಿಕ ಸಾಕ್ಷಿಗಳು, ಎಫ್ಎಸ್ಎಲ್ ವರದಿಗಳನ್ನು ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಕೃತ್ಯದ ವಿಡಿಯೋ & ಸಾಂದರ್ಭೀಕ ಸಾಕ್ಷಿಗಳು ಮ್ಯಾಚ್ ಆಗಿವೆ. ಎಫ್ಎಸ್ಎಲ್ ವರದಿಯಲ್ಲೂ ಸಹ ವಿಡಿಯೋ ಮ್ಯಾಚ್ ಆಗಿದ್ದು, 60 ವರ್ಷದ ಸಂತ್ರಸ್ಥೆ ಹೇಳಿಕೆಗೂ ಸಿಕ್ಕ ಸಾಕ್ಷಿಗಳ ಮೂಲಕ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದ ಭಯಾನಕ ಸತ್ಯ ಬಯಲಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಮನೆ ಕೆಲಸದಾಕೆ ಗಂಭೀರ ಹೇಳಿಕೆ ನೀಡಿದ್ದರು. ದಮ್ಮಯ್ಯ ಅಂದ್ರೂ ಬಿಡದೇ ಆತ್ಯಾಚಾರ ಎಸಗಿದ್ದಾರೆ. ಅಣ್ಣಾ.. ಬಾಗಿಲ ಚಿಲಕ ತೆಗೆಯಣ್ಣ. ನನಗೆ ಭಯ ಆಗ್ತಾ ಇದೆ. ಹೊರಗೆ ಹೋಗ್ತಿನಿ. ನಿನ್ನ ದಮ್ಮಯ್ಯ ಬಾಗಿಲು ತೆಗಿ ಎಂದು ಮನವಿ ಮಾಡಿದ್ದೆ. ಆದರೂ ಕೇಳದೆ ಮೈ ಮೇಲಿನ ಬಟ್ಟೆಯನ್ನು ಪ್ರಜ್ವಲ್ ರೇವಣ್ಣ ಬಿಚ್ಚಿಸಿದ್ದರಂತೆ.
ನನ್ನ ಬೆತ್ತಲುಗೊಳಿಸಿ ಬಲವಂತವಾಗಿ ಬೆಡ್ ಮೇಲೆ ಮಲಗಿಸಿದ್ದರು. ನನ್ನ ಮೇಲೆ ಕಂಟ್ರೋಲ್ ತೆಗೆದುಕೊಂಡು ಅತ್ಯಾಚಾರ ಮಾಡಿದರು. ಬೇಡ, ಬೇಡ ಆಂದ್ರೂ ಏನು ಆಗಲ್ಲ ಎಂದ ಪ್ರಜ್ವಲ್ ರೇವಣ್ಣ ಅವರು ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ
ಸಂತ್ರಸ್ತೆಯನ್ನು ಮನೆ ಸ್ವಚ್ಚಗೊಳಿಸುವ ಕೆಲಸಕ್ಕಾಗಿ ಆಗಾಗ ಕರೆಸಿಕೊಳ್ತಿದ್ದರು. ಅವರ ತಂದೆ ತಾಯಿ ಇಲ್ಲದ ಸಮಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮನೆ ಕೆಲಸದಾಕೆ ಗಂಭೀರ ಆರೋಪಗಳನ್ನು ಮಾಡಿದ್ದರು..
ಇನ್ನು ಚಾರ್ಜ್ಶೀಟ್ನಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಬ್ಲ್ಯಾಕ್ ಮೇಲ್ ಮಾಡಲು ಅತ್ಯಾಚಾರದ ವಿಡಿಯೋ ರೆಕಾರ್ಡ್ ಮಾಡಿದ್ದರು. ಉದ್ದೇಶಪೂರ್ವಕವಾಗಿಯೇ ವಿಡಿಯೋ ರೆಕಾರ್ಡ್ ಮಾಡಿದ್ದು, ಸಂತ್ರಸ್ತೆಯೂ ಅತ್ಯಾಚಾರವನ್ನು ಯಾರಿಗೂ ಹೇಳದಂತೆ ಮಾಡಲು ಪ್ಲಾನ್ ಮಾಡಿದ್ದಾರೆ. ಮತ್ತೆ ಇದೇ ರೀತಿ ಕೃತ್ಯಕ್ಕೆ ಸಹಕರಿಸಲು ಈ ವಿಡಿಯೋ ರೆಕಾರ್ಡ್ ತೋರಿಸಿ ಒತ್ತಾಯಿಸಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಎಸ್ಐಟಿ ಉಲ್ಲೇಖಿಸಿದೆ.
ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಸಲ್ಲಿಕೆಯಾಗಿರೋದು ಪ್ರೈಮರಿ ಚಾರ್ಜ್ ಶೀಟ್ ಮಾತ್ರ. ಕೇಸ್ 90 ದಿನ ಮುಕ್ತಾಯ ಆದ ಹಿನ್ನಲೆ ಪ್ರೈಮರಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎಸ್ಐಟಿ ವಿಶೇಷ ಟೀಂ ಇನ್ನೂ ತನಿಖೆಯನ್ನ ಮುಂದುವರಿಸಿದೆ