ಬೆಂಗಳೂರು:– ಇಡಿ ಚಾರ್ಜ್ ಶೀಟ್ನಲ್ಲಿ ನಾಗೇಂದ್ರ ಹೆಸರು ಇರುವುದಕ್ಕೆ ಸಿಎಂ ಹೊಣೆ ಹೊರಬೇಕು ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
Vijayendra: ಖಾಲಿ ಆಗುವ ಸಿಎಂ ಸ್ಥಾನಕ್ಕೆ ಹಗ್ಗ ಜಗ್ಗಾಟ ಶುರುವಾಗಿದೆ: ವಿಜಯೇಂದ್ರ!
ವಾಲ್ಮೀಕಿ ಹಗರಣದಲ್ಲಿ ನಾಗೇಂದ್ರ ಪ್ರಮುಖ ಪಾತ್ರದ ಬಗ್ಗೆ ಚಾರ್ಜ್ ಶೀಟ್ನಲ್ಲಿ ಉಲ್ಲೇಖ ಆಗಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಹೊಣೆ ಹೊರಬೇಕು. ಸಂದೇಹವೇ ಬೇಡ. ಈ ಬಗ್ಗೆ ನಾವು ಮೊದಲಿನಿಂದ ಹೇಳಿದ್ದೇವೆ. ಇದಕ್ಕೆ ಸಿದ್ದರಾಮಯ್ಯ ಅವರು ಹೊಣೆ ಹೊರಬೇಕು. ಆರ್ಥಿಕ ಇಲಾಖೆ ಅವರ ಕೈಯಲ್ಲಿದೆ. ಚುನಾವಣೆಗೆ ಹಣ ಬಳಕೆ ಆಗಿದೆ ಎಂದರೆ ಇದರ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಇದೆ ಎಂದು ಆರೋಪಿಸಿದರು.
ಚಂದ್ರಶೇಖರ್ ಆತ್ಮಹತ್ಯೆ ಪತ್ರದಲ್ಲಿ ಸ್ಪಷ್ಟವಾಗಿ ಇತ್ತು. ನಾಗೇಂದ್ರ ನಿರ್ದೇಶನದಂತೆಯೇ ಆಗಿದೆ. ಚುನಾವಣೆ ಬಳಿಕ ಈ ಬಗ್ಗೆ ಸ್ಪಷ್ಟವಾಗಿ ಕಂಡಿದೆ. ಇಡಿ ಚಾರ್ಜ್ ಶೀಟ್ ಬಹಳ ಸ್ಪಷ್ಟವಾಗಿ ಹೇಳಿದೆ.ಹೆಚ್ಚಿನ ತನಿಖೆ ಆದಾಗ ಪ್ರಮುಖ ವ್ಯಕ್ತಿಗಳು ಹೊರ ಬರುತ್ತಾರೆ. ನೇರವಾಗಿ ಖಜಾನೆಯಿಂದಲೇ ಹಣ ಹೋಗಿರೋದು ಇದೇ ಮೊದಲು ಅನಿಸುತ್ತದೆ. ಹಣಕಾಸು ಇಲಾಖೆ ಗೊತ್ತಿಲ್ಲದೇ ಇದು ನಡೆದಿಲ್ಲ ಎಂಬುದು ಗೊತ್ತಾಗುತ್ತಿದೆ. ಹಿಂದೆ ಕೆವಲ ಆರೋಪ ಆಗಿತ್ತು. ಈಗ ಸ್ಪಷ್ಟವಾಗುತ್ತಿದೆ. ಚಂದ್ರಶೇಖರ್ ಆತ್ಮಹತ್ಯೆ ಡೆತ್ ನೋಟಲ್ಲಿ ಹಣವನ್ನ ಟ್ರಾನ್ಸ್ಫರ್ ಮಾಡಿರುವುದು ಎಲೆಕ್ಷನ್ಗೆ ಬಳಕೆ ಆಗಿರೋದು ಬಹಳ ಸ್ಪಷ್ಟವಾಗಿದೆ ಎಂದರು.
ರಾಜ್ಯ ಸರ್ಕಾರ ವಿಫಲವಾಗಿದೆ. ಎಸ್ಐಟಿ ಮೂಲಕ ಎಫ್ಐಆರ್ ಕೂಡ ದಾಖಲಿಸಿರಲಿಲ್ಲ. ಇನ್ನೂ ಮತ್ತಷ್ಟು ವ್ಯಕ್ತಿಗಳ ಹೆಸರು ಹೊರಗೆ ಬರುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಮೇಲೆ ಆಪಾದನೆ ಇದೆ. ಅಂದು, ಇಂದು, ಮುಂದೆ ಕೂಡ ಹಣ ಬಳಕೆ ಬಗ್ಗೆ ಆಪಾದನೆ ಮಾಡುತ್ತೇವೆ. 100% ಪೇಮೆಂಟ್ ಆಗಿದೆ. ಖಜಾನೆ ಮೂಲಕ ಅಕೌಂಟಿಗೆ ಹೋಗಿದ್ರೆ, ಇದೇ ಇತಿಹಾಸದಲ್ಲಿ ಮೊದಲು. ಹಣಕಾಸು ಇಲಾಖೆ ಸಹಕಾರ ಇಲ್ಲದೆ ಇದು ಆಗಲು ಸಾಧ್ಯವಿಲ್ಲ ಎಂದಿದ್ದಾರೆ.