ಬೆಂಗಳೂರು: ಗಣೇಶ ಮೆರವಣಿಗೆ ಹಿನ್ನೆಲೆ, ನಾಗವಾರ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಲಿದ್ದು, ಪಾರ್ಕಿಂಗ್ ನಿಷೇಧ ಮಾಡಲಾಗಿದೆ.
ಕೆ.ಜಿ.ಹಳ್ಳಿ ಮತ್ತು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾನರಿ ರಸ್ತೆ ಮೂಲಕ ಗಣಪತಿ ಮೂರ್ತಿಗಳ ಮೆರವಣಿಗೆ ನಡೆಯಲಿದೆ. ಹೀಗಾಗಿ ಸೆಪ್ಟೆಂಬರ್ 11 ರಂದು ಈ ರಸ್ತೆಯಲ್ಲಿ ಮಧ್ಯಾಹ್ನ 12:30 ರಿಂದ ರಾತ್ರಿ 1:00 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಸಂಚಾರ ನಿರ್ಬಂಧ
ನಾಗವಾರ ಮುಖ್ಯ ರಸ್ತೆ ಮತ್ತು ಟ್ಯಾನು / ಡೇವಿಸ್ ರೋಡ್ ಮುಖ್ಯ ರಸ್ತೆ
ನೇತಾಜಿ ಜಂಕ್ಷನ್ನಿಂದ ಪಾಟರಿ ಸರ್ಕಲ್ ಮೂಲಕ ಟ್ಯಾನರಿ ರಸ್ತೆ ಕಡೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.
ರೋಜರ್ ರಸ್ತೆ, ಆರ್ಮ್ ಸ್ಟ್ರಾಂಗ್ ರಸ್ತೆ ಹಾಗೂ ಹಾಲ್ ರಸ್ತೆ ಕಡೆಯಿಂದ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮಾಸ್ಕ್ ಜಂಕ್ಷನ್ನಿಂದ ಕ್ಲಾರೆನ್ಸ್ ಬ್ರಿಡ್ಜ್ ಮೂಲಕ ಪಾಟರಿ ರಸ್ತೆ ಕಡೆಗೆ ಹೋಗುವ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಲಾಜರ್ ರಸ್ತೆ ಮತ್ತು ಎಂ.ಎಂ ರಸ್ತೆ ಜಂಕ್ಷನ್ ನಿಂದ ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಬುದ್ಧ ವಿಹಾರ ರಸ್ತೆ ಮೂಲಕ ಹೋಗುವ ಸಂಚಾರ ಬಂದ್ ಮಾಡಲಾಗಿದೆ.
ಸಿಂಧಿ ಕಾಲೋನಿ ಜಂಕ್ಷನ್ನಿಂದ ವಾರ್ ಮೆಮೋರಿಯಲ್ ಜಂಕ್ಷನ್ ಕಡೆಗೆ ಅಸಯೇ ರಸ್ತೆಯಲ್ಲಿ ದ್ವಿಮುಖ ಸಂಚಾರವನ್ನು ಬದಲಾಯಿಸಲಾಗಿದ್ದು, ಸಿಂಧಿ ಕಾಲೋನಿ ಜಂಕ್ಷನ್ ಕಡೆಗೆ ಮಾತ್ರ ಏಕ ಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸಂಚಾರಕ್ಕೆ ಪರ್ಯಾಯ ಮಾರ್ಗ:-
ಧಣಿಸಂದ್ರ ಮುಖ್ಯ ರಸ್ತೆಯ ಕಡೆಯಿಂದ ಪುಲಕೇಶಿನಗರ ಮತ್ತು ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಥಣಿಸಂದ್ರ ಮುಖ್ಯ ರಸ್ತೆ ನಾಗವಾರ ಜಂಕ್ಷನ್ನಲ್ಲಿ ಎಡ ತಿರುವು ಪಡೆದುಕೊಂಡು ಹೆಣ್ಣೂರು ಜಂಕ್ಷನ್ನಲ್ಲಿ ಬಲ ತಿರುವು ಹೆಚ್.ಬಿ.ಆರ್ 30 ಅಡಿ ರಸ್ತೆ ಸಿದ್ದಪ್ಪರೆಡ್ಡಿ ಜಂಕ್ಷನ್ – ಅಯೋದ್ಯ ಜಂಕ್ಷನ್ ಲಿಂಗರಾಜಮರಂ ಫೈ ಓವರ್ನಿಂದ ಹೆಚ್.ಎಂ ರೋಡ್ ಡೇವಿಸ್ ರೋಡ್ – ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ – ಶಿವಾಜಿನಗರ ಕಡೆಗೆ ಸಂಚರಿಸಬಹುದಾಗಿದೆ.
ಟ್ಯಾನರಿ ಮುಖ್ಯ ರಸ್ತೆ ಕಡೆಯಿಂದ ಥಣಿಸಂದ್ರ ಕಡೆಗೆ ಸಂಚರಿಸುವ ವಾಹನಗಳು ಪುಲಕೇಶಿನಗರ ಸಂಚಾರ ಪೊಲೀಸ್ ಠಾಣೆ ಮಾರ್ಗವಾಗಿ – ಡೇವಿಸ್ ರೋಡ್ ಹೆಚ್.ಎಂ ರೋಡ್ ಜಂಕ್ಷನ್-ಲಿಂಗರಾಜಪುರಂ ಫ್ಲೈ ಓವರ್ – ಅಯೋಧ್ಯೆ ಜಂಕ್ಷನ್ – ಸಿದ್ದಪ್ಪ ರೆಡ್ಡಿ ಜಂಕ್ಷನ್ – ಹೆಣ್ಣೂರು ಜಂಕ್ಷನ್ ಎಡತಿರುವು – ಹೊರ ವರ್ತೂಲ ರಸ್ತೆ – ನಾಗವಾರ ಜಂಕ್ಷನ್ನಲ್ಲಿ ಬಲತಿರುವು ಪಡೆದುಕೊಂಡು ನೇರವಾಗಿ ಥಣಿಸಂದ್ರ ಕಡೆಗೆ ಸಂಚರಿಸಬಹುದಾಗಿದೆ.
ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್ನಲ್ಲಿ ಬಲತಿರುವು ಪಡೆದು ಎಂ.ಎಂ ರಸ್ತೆ – ಮಾಸ್ಕ್ ಜಂಕ್ಷನ್ನಲ್ಲಿ ಎಡತಿರುವು ಪಡೆದುಕೊಂಡು ಕ್ಲಾರೆನ್ಸ್ ಬ್ರಿಡ್ಜ್ ಬಲತಿರುವು ಪಡೆದುಕೊಂಡು ಪಾಟರಿ ರಸ್ತೆ ಹೆಚ್.ಎಂ. ರಸ್ತೆ ಮೂಲಕ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಲು ಅನುವು ಮಾಡಿಕೊಡಲಾಗಿದೆ
ನೇತಾಜಿ ಜಂಕ್ಷನ್ ಕಡೆಯಿಂದ ಟ್ಯಾನರಿ ರಸ್ತೆ ಮೂಲಕ ನಾಗಾವರ ಕಡೆಗೆ ಹೋಗುವ ವಾಹನಗಳನ್ನು ಮಾರ್ಗ ಬದಲಾವಣೆ ಮಾಡಿ ನೇತಾಜಿ ಜಂಕ್ಷನ್ನಲ್ಲಿ ಬಲತಿರುವು ಪಡೆದುಕೊಂಡು ಎಂಎಂ ರಸ್ತೆಯಲ್ಲಿ ನೇರವಾಗಿ ಚಲಿಸಿ ಪಾಟರಿ ರಸ್ತೆ ರೈಲ್ವೆ ಅಂಡರ್ ಟ್ರಸ್ಟ್ ಮುಖಾಂತರ ಪಾಟರಿ ರಸ್ತೆ ತಲುಪಿ ಬಲ ತಿರುವು ಪಡೆದು ಹೆಚ್.ಎಂ.ರಸ್ತೆ ಮೂಲಕ ಲಿಂಗರಾಜಪುರಂ ಹಾಗೂ ಹೆಣ್ಣೂರು ಕಡೆಗೆ ಸಂಚರಿಸಬಹುದು.
ಕ್ಲಾರ್ಕ್ ರಸ್ತೆ ಮೂಲಕ ಪಾಟರಿ ಜಂಕ್ಷನ್ ಕಡೆಗೆ ಸಂಚಾರವನ್ನು ಮಾರ್ಗ ಬದಲಾವಣೆ ಮಾಡಿ ಲಾಜರ್ ರಸ್ತೆಯಲ್ಲಿ ಸಂಚರಿಸಿ ರೈಲ್ವೆ ಅಂಡರ್ ಬ್ರಿಡ್ಜ್ ಮುಖಾಂತರ ಎಂ.ಎಂ ರಸ್ತೆ ತಲುಪಿ ಮಲಕೇಶಿನಗರ ಕಡೆಗೆ ಸಂಚರಿಸಬಹುದು.