ಮೈಸೂರು: ಮುಡಾ ಆಸ್ತಿ ರಕ್ಷಣೆ ಮಾಡಿಕೊಳ್ಳುವಲ್ಲಿ ವಿಫಲರಾದ ಮುಡಾದ 18 ಅಧಿಕಾರಿಗಳಿಗೆ ಲೋಕಾಯುಕ್ತ ನೊಟೀಸ್ ಜಾರಿ ಮಾಡಿದೆ. ಹಿನಕಲ್ ಸರ್ವೇ ನಂ 89ರಲ್ಲಿ 7 ಎಕರೆ 18 ಗುಂಟೆ ಜಮೀನನ್ನು ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆ ಮುಡಾ ಸ್ವಾಧೀನ ಮಾಡಿಕೊಂಡಿತ್ತು. ಈ ಜಾಗದಲ್ಲಿ ಹಿನಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಅಶ್ರಯ ಯೋಜನೆಯಡಿ ನಿವೇಶನ ಹಂಚಲು ಮುಂದಾಗಿದ್ದರು.
ಮುಡಾ ಆಸ್ತಿಗೆ ಪಂಚಾಯಿತಿಯವರು 1996-97ರಲ್ಲಿ ಅತಿಕ್ರಮ ಪ್ರವೇಶ ಮಾಡಿ 25×25 ಅಳತೆಯ ನಿವೇಶನ 350 ನಿವೇಶನ ರಚಿಸಿ, ಬೆಮೆಲ್ ನೌಕರರು, ಶಾಲಾ ಶಿಕ್ಷಕರು, ಪಂಚಾಯತ್ ಪಿಡಿಓಗಳು, ಪೋಸ್ಟ್ ಆಫೀಸ್ ನೌಕರರು, ಸರ್ಕಾರಿ ಪ್ರೆಸ್ ನೌಕರರು, ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಿದ್ದರು.ಬಡ ಜನರಿಗೆ ಆಶ್ರಯ ನಿವೇಶನ ಹಂಚುತ್ತೇವೆಂದು ಮುಡಾ ಆಸ್ತಿಯನ್ನು ಅಕ್ರಮ ನಿವೇಶನ ಮಾಡಿ,
ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!
ಉಳ್ಳವರಿಗೆ ನಿವೇಶನ ಹಂಚಿಕೆ ಮಾಡಿದ್ದರ ವಿರುದ್ದ ಆರ್.ಟಿ.ಐ ಕಾರ್ಯಕರ್ತ ಗಂಗರಾಜು 2017ರಲ್ಲಿ ಎಸಿಬಿಗೆ ದೂರು ನೀಡಿದ್ದರು.2022ರಲ್ಲಿ ಗಂಗರಾಜು ದೂರು ಆಧರಿಸಿ ಎಸಿಬಿ FIR ದಾಖಲಿಸಿತ್ತು.ಬಳಿಕ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾದ ಹಿನ್ನೆಲೆ ಪ್ರಾಧಿಕಾರದ ಅಧಿಕಾರಿಗಳು ತಮ್ಮ ಆಸ್ತಿ ರಕ್ಷಣೆ ಮಾಡಿಕೊಳ್ಳಲು ವಿಫಲರಾಗಿದ್ದರಿಂದ 18 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ. 3 ದಿನಗಳ ಒಳಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನಲ್ಲಿ ಲೋಕಾಯುಕ್ತ ಸೂಚನೆ ಕೊಟ್ಟಿದೆ.