ಬೆಂಗಳೂರು: ಸಿಎಂ ಸ್ಥಾನ ಖಾಲಿ ಇಲ್ಲ. ಖಾಲಿಯಿರದ ಸ್ಥಾನದ ಬಗ್ಗೆ ಚರ್ಚೆ ಅಪ್ರಸ್ತುತ ಎಂದು ಕುಣಿಗಲ್ ಶಾಸಕ ರಂಗನಾಥ್ ಸ್ವಪಕ್ಷದವರಿಗೆ ತಿರುಗೇಟು ಕೊಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸದ್ಯ ಸಿಎಂ ಸ್ಥಾನದ ಕುರಿತು ನಡೆಯುತ್ತಿರುವ ಚರ್ಚೆ ವಿಷಯವಾಗಿ ಮಾತನಾಡಿ, ಎಂಎಲ್ಸಿಗಳಿಂದ ಕಾಂಗ್ರೆಸ್ ಹೈಕಮಾಂಡ್ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.
ಎಂಎಲ್ಎಗಳ (MLA) ಪತ್ರಕ್ಕೆ ನನ್ನ ಸಹಮತ ಇದೆ. ನನ್ನ ದೃಷ್ಟಿಯಲ್ಲಿ ರಾಜ್ಯದ ಸಮಸ್ಯೆ ನಿವಾರಣೆಗೆ ನಾವೆಲ್ಲ ಕೆಲಸ ಮಾಡಬೇಕು. ಸಿಎಂ ಬದಲಾವಣೆ ವಿಚಾರ ಮಾತಾನಾಡೋದು ಅಪ್ರಸ್ತುತ. ಸಿದ್ದರಾಮಯ್ಯ ವರು ಉತ್ತಮವಾಗಿ ಕೆಲಸ ಮಾಡ್ತಿದ್ದಾರೆ. ಸದ್ಯ ಸಿಎಂ ಸ್ಥಾನ ಖಾಲಿ ಇಲ್ಲ. ಆ ಬಗ್ಗೆ ಚರ್ಚೆ ಸರಿಯಲ್ಲ ಎಂದರು.
ಅನೇಕ ವಿಷಯಗಳ ಪ್ರಣಾಳಿಕೆಯಲ್ಲಿ ಕೊಟ್ಟಿದ್ದೇವೆ. 5 ಗ್ಯಾರಂಟಿ, ಎತ್ತಿನಹೊಳೆ ಯೋಜನೆ ಉದ್ಘಾಟನೆ ಆಗಿದೆ. ಇದೊಂದು ಸಾಧನೆ, ನಮ್ಮ ಸರ್ಕಾರಕ್ಕೆ ಗರಿ ಅದು. ಅಂತಹ ಕೆಲಸ ಮಾಡಬೇಕು. ಇಲ್ಲ ಸಲ್ಲದ ವಿಚಾರ ಚರ್ಚೆ ಮಾಡಿ ವಿಪಕ್ಷಗಳಿಗೆ ಆಹಾರ ಆಗೋದು ಬೇಡ. ನಮ್ಮ ಅಧ್ಯಕ್ಷರು ಹೊರಗೆ ಹೋಗಿದ್ದಾರೆ ಅವರು ಬಂದ ಮೇಲೆ ಇಂತಹ ಮಾತುಗಳ ಬಗ್ಗೆ ಗಮನಹರಿಸುತ್ತಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ನಾವೆಲ್ಲ ಶಿಸ್ತಿನ ಸಿಪಾಯಿಗಳು. ಇಂತಹ ಗೊಂದಲಗಳು ಆಗೋದು ಬೇಡ. ಸಿಎಂ ಸ್ಥಾನ ಖಾಲಿ ಇಲ್ಲ ಅಂದ ಮೇಲೆ ಯಾಕೆ ಅದರ ಬಗ್ಗೆ ಮಾತಾಡ್ತಾರೆ. ಅದರ ಬಗ್ಗೆ ಯಾಕೆ ಮಾತಾಡ್ತೀವಿ ಅನ್ನೋದು ಗೊತ್ತಿಲ್ಲ ಯಾರೂ ಸಿಎಂ ವಿಚಾರದ ಬಗ್ಗೆ ಮಾತಾನಾಡೋದು ಬೇಡ. ಸಿದ್ದರಾಮಯ್ಯ 5 ವರ್ಷ ಇರುತ್ತಾರೆಎ ಎಂದು ಹೈಕಮಾಂಡ್ ನಾಯಕರು ಹೇಳಿದ್ದಾರೆ.