ಹುಬ್ಬಳ್ಳಿ; ಯಾವುದೇ ಕಾರಣಕ್ಕೋ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ನನಗೆ ಗೊತ್ತು ಇಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಬಹುತೇಕ ಸಚಿವರು ಸಿಎಂ ಆಗುವ ಇಂಗಿತ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಅವರುಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಏನಾದರೂ ಹೇಳಿದ್ದೇ ಆದರೆ ಅದು ಅವರ ವೈಯಕ್ತಿಕ ವಿಚಾರ ಆಗಿದೆ. ಸಿಎಂ ಬದಲಾವಣೆ ವಿಚಾರ ಯಾವುದೇ ಪ್ರಸ್ತಾಪ ಇಲ್ಲ, ಈಗಾಗಲೇ ಪಕ್ಷದ ಹಿರಿಯ ನಾಯಕರಾದ ಸುರ್ಜೇವಾಲ್, ವೇಣುಗೋಪಾಲ ಸಹ ಬಂದು ಸ್ಪಷ್ಟನೆ ಕೊಟ್ಟು ಹೋಗಿದ್ದಾರೆ ಎಂದರು.
ಇನ್ನು ಮುಡಾ ಇರಬಹುದು ವಾಲ್ಮೀಕಿ ಹಗರಣ ಇರಬಹುದು ಈಗಾಗಲೇ ಸ್ಪಷ್ಟನೆ ಕೊಡಲಾಗಿದೆ. ಮುಡಾ ಹಗರಣದಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತು ಈ ಬಗ್ಗೆ ಕಾನೂನಾತ್ಮಕ ಹೋರಾಟ ಸಹ ನಡೆದಿದ್ದು ಅಲ್ಲಿ 105 ಸೈಟ್ ಗಳಿಗೆ ಯಾವುದೇ ಕಾನೂನು ಅನ್ವಯ ಆಗಲ್ಲಾ ಕೇವಲ ಸಿದ್ಧರಾಮಯ್ಯಾ ನವರ ಪತ್ನಿ ಅವರಿಗೆ ಮಾತ್ರ ಯಾಕೆ ಅನ್ವಯ ಆಗುತ್ತದೆ. ಇದಕ್ಕೆ ಭಾರತೀಯ ಜನತಾ ಪಕ್ಷದಬರು ಸ್ಪಷ್ಟನೆ ಕೊಡತ್ತಾರೆ ಎಂದರು.
ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!
ಇನ್ನು ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ಈಗ ಕೊಡುತ್ತೇವೆ ಎಂದರೇ ಮುಖ್ಯಮಂತ್ರಿಗಳು ತೊಗೊತಾ ಇಲ್ಲಾ ಈ ಬಗ್ಗೆ ಆಹಾರ ಸಚಿವ ಮುನಿಯಪ್ಪನವರಿಗೆ ನಾವು ಅಕ್ಕಿ ಕೊಡುವುದಾಗಿ ತಿಳಿಸಿದ್ದೇವೆ ಎಂದರು. ಆದರೆ ಇದುವರೆಗೆ ಯಾವುದೇ ರೀತಿಯ ಉತ್ತರ ಮುಖ್ಯಮಂತ್ರಿಗಳಿಂದ ಬಂದಿಲ್ಲ ಎಂಬ ವಿಚಾರವಾಗಿ ಮಾತನಾಡಿದ ಅವರು ಈಗ ಯಾಕೆ ಕೊಡಲು ಮುಂದೆ ಬಂದರು ನಾವು ಕೇಳಿದಾಗ ಯಾಕೆ ಕೊಡಲಿಲ್ಲ. ಆವಾಗ ಅಕ್ಕಿ ಸಂಗ್ರಹ ಇತ್ತು.
ಈಗಾಗಲೇ ನಾವು ಜನರಿಗೆ ಅಕ್ಕಿ ಬದಲಾಗಿ ಹಣ ಫಲಾನುಭವಿಗಳ ಖಾತೆಗೆ ಹಾಕತಾ ಇದ್ದೇವೆ ಎಂದರು. ಆದರೆ ಇದರಲ್ಲಿ ಸಹ ರಾಜಕಾರಣ ಮಾಡುವುದು ಸರಿಯಲ್ಲ. ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದವರು ಯಾರು ಉಚಿತವಾಗಿ ಅಕ್ಕಿ ವಿತರಣೆ ಮಾಡುವ ಯೋಜನೆಗೆ ಜಾರಿಗೆ ತಂದವರು ನಾವು ಆದ್ದರಿಂದ ಪ್ರಲ್ಹಾದ್ ಜೋಶಿ ಅವರು ಈ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಲಿ ಎಂದರು. ಇನ್ನು ದೇಶಕ್ಕೆ ಏನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಆಗಿದೆ ಮೊದಲು ಸ್ಪಷ್ಟನೆ ಕೊಡಲಿ ಎಲ್ಲವನ್ನೂ ಟ್ಯಾಬ್ ಹಾಗೂ ಕಂಪ್ಯೂಟರ್ ಮೂಲಕ ನೋಡುತ್ತಾರೆ ಬಡವರು ಎಷ್ಟು ಇದ್ದಾರೆ ಅವರ ಸಮಸ್ಯೆ ಏನು ಬಗೆಹರಿದಿವೆ ಎಂಬುದನ್ನು ಅಂಕಿ ಸಂಖ್ಯೆ ಸಮೇತ ಉತ್ತರ ಕೊಡಲಿ ಎಂದರು