ಶಿವಮೊಗ್ಗ: ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣೆಗೆ ಕುಂಕುಮವನ್ನೇ ಹಚ್ಚಿಕೊಳ್ಳುತ್ತಿರಲಿಲ್ಲ. ತಲೆಗೆ ಕೇಸರಿ ಪೇಟ ಹಾಕಲು ಹೋದರೆ ಕಿತ್ತು ಬಿಸಾಕುತ್ತಿದ್ದರು. ಇದೀಗ ಇದ್ದಕ್ಕಿದ್ದ ಹಾಗೆ ತಾಯಿ ಚಾಮುಂಡೇಶ್ವರಿ ದೇವಿ ಮೇಲೆ ಭಕ್ತಿ ಬಂದಿದೆ. ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ದಾರೆ. ಮೈಲಾರಕ್ಕೆ ಹೋಗಿ ಮಾಡಿದ್ದಾರೆ. ಇದನ್ನು ನಾನು ಟೀಕಿಸುವುದಿಲ್ಲ. ಸ್ವಾಗತ ಮಾಡುತ್ತೇನೆ’ ಎಂದು ಮಾಜಿ ಸಿಎಂ ಈಶ್ವರಪ್ಪ ಹೇಳಿದರು.
ಭಾರತದಲ್ಲಿನ ಎಲ್ಲಾ ಹಿಂದುಗಳು ಪೂಜೆ ಮಾಡುವವರು. ದೇವರಿಗೆ ಗೌರವ ಕೊಡುವವರು. ದೇವರ ಭಕ್ತಿ ಮನಸ್ಸಿನಲ್ಲಿರುತ್ತೆ. ಆದರೆ ಮುಸಲ್ಮಾನರ ಓಲೈಕೆಗಾಗಿ ಅವರ ಟೋಪಿ ಹಾಕಿಕೊಳ್ಳುವುದು. ಅವರ ಪರವಾಗಿ ಹೇಳಿಕೆಗಳನ್ನು ಕೊಡುವುದು, ಅವರ ಪರವಾಗಿ ಆದೇಶಗಳನ್ನು ಹೊರಡಿಸುವುದು ಮಾಡ್ತಾರೆ. ಓಟ್ ಬ್ಯಾಂಕ್ಗಾಗಿ, ಕುರ್ಚಿಗಾಗಿ ಈ ರೀತಿ ಮಾಡ್ತಾರೆ. ಇವೆಲ್ಲ ಬಹಳ ದಿನ ನಡೆಯಲ್ಲ.
ಗಡಿಬಿಡಿಯಲ್ಲಿ ಗರ್ಭ ನಿರೋಧಕ ಮಾತ್ರೆಯನ್ನು ಹೀಗೆಲ್ಲಾ ತಿನ್ಬೇಡಿ: ಇಲ್ಲದಿದ್ರೆ ಪ್ರಾಣಕ್ಕೆ ಆಪತ್ತು!
ಮೊದಲು ದೇವೇಗೌಡರು ಈ ರೀತಿ ಮಾಡ್ತಿದ್ದರು. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದಿದ್ದರು. ಸಿದ್ದರಾಮಯ್ಯನವರು ಪೂರ್ಣ ಮುಸಲ್ಮಾನರಿಗೆ ಶರಣಾಗಿದ್ದರು. ಅವರ ಸರ್ಕಾರ ಬಂದಿದ್ದು ಕೂಡಾ ಮುಸಲ್ಮಾನರ ಕೃಪಾಕಟಾಕ್ಷದಿಂದ ಎಂಬಂತೆ ಹೇಳಿದ್ದರು. ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆ ತಾಯಿ ಅವರನ್ನು ಕಾಪಾಡಲಿ’ ಎಂದು ಈಶ್ವರಪ್ಪ ಹೇಳಿದರು.