ದೊಡ್ಡಬಳ್ಳಾಪುರ: ಅದು ಆ ಗ್ರಾಮದ ಹೊರ ವಲಯದಲ್ಲಿರುವ ಗುಡ್ಡದ ಮೇಲಿನ ಮಂಟಪ ಇದೇ ಮನೆಯಲ್ಲಿ ತಾಯಿ ಮತ್ತು ಮಗ ವಾಸವಾಗಿದ್ದು ನಿತ್ಯ ಕೂಲಿ ಮಾಡಿಕೊಂಡು ಬಂದು ಜೀವನ ಸಾಗಿಸುತ್ತಿದ್ರು. ಜೊತೆಗೆ ನೆನ್ನೆ ಖುಷಿ ಖುಷಿಯಾಗೆ ಹಬ್ಬವನ್ನು ಆಚರಿಸಿದ್ದ ಮನೆಯಲ್ಲಿದ್ದ ಮಹಿಳೆ ಇಂದು ಬೆಳಗ್ಗೆ ಮನೆಯಲ್ಲೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾಳೆ.
ಗುಡ್ಡದ ಸುತ್ತಾಮುತ್ತ ಹಚ್ಚ ಹಸಿರಿನ ತೋಟ ತೋಟದ ನಡುವೆ ಗುಡ್ಡದ ಮೇಲಿರುವ ಮಂಟಪದ ಬಳಿಗೆ ಪೊಲೀಸರು ಜಮಾಯಿಸಿದ್ದು ಮಂಟಪ ಒಳಗೆ ಇಂಚಿಂಚು ಶೋಧ ನಡೆಸುತ್ತಿದ್ದಾರೆ. ಗ್ರಾಮಸ್ಥರೆಲ್ಲ ಏನಾಯಿತು ಅಂತ ಕುತೂಹಲದಲ್ಲಿ ಬಂದು ನೋಡಿದವರಿಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ ಕೊಲೆಯಾಗಿ ಬಿದ್ದಿರುವ ಮಹಿಳೆಯ ಮೃತದೇಹ ಕಂಡು ಬಂದಿದ್ದು ಗ್ರಾಮಕ್ಕೆ ಗ್ರಾಮವೆ ಬೆಚ್ಚಿ ಬಿದ್ದಿದೆ.
ಹೌದು ಅಂದಹಾಗೆ ಇಲ್ಲಿ ಈ ರೀತಿ ಬರ್ಬರವಾಗಿ ಕೊಲೆಯಾಗಿರುವ ಈಕೆಯ ಹೆಸರು ರತ್ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಫುರ ತಾಲೂಕಿನ ರಾಗರಾಳ್ಳಗುಟ್ಟ ಅನ್ನೂ ಗುಡ್ಡದ ಮೇಲೆ ದೇವಸ್ಥಾನದ ಮಂಟಪದಲ್ಲಿ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದ ಈಕೆ ಇಂದು ಎಂದಿನಂತೆ ನಿದ್ದೆಯಲ್ಲಿದ್ಲು ಹೊರಗಡೆ ಬರುವುದರಲ್ಲಿದ್ಲು. ಆದ್ರೆ ಅಷ್ಟರಲ್ಲೆ ಮನೆ ಬಳಿಗೆ ಬಂದ ಎರಡನೆ ಮಗ ಗಂಗರಾಜು ತಾಯಿ ಜೊತೆ ಎಂದಿನಂತೆ ಹಣಕ್ಕಾಗಿ ಕಿರಿಕ್ ತೆಗೆದಿದ್ದು ತಾಯಿ ಮತ್ತು ಮಗನ ನಡುವೆ ಜಗಳ ಶುರುವಾಗಿದೆ.
ಆದ್ರೆ ಜಗಳ ಶುರುವಾದ ಕೆಲವೆ ನಿಮಿಷಗಳಲ್ಲಿ ವಿಕೋಪಕ್ಕೆ ತಿರುಗಿದ್ದು ಹಾಸಿಗೆ ಮೆಲೆ ಮಲಗಿದ್ದ ತಾಯಿಯ ಮೇಲೆ ಏಕಾಏಕಿ ದಾಳಿ ನಡೆಸಿದ ಮಗ ತಾಯಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಮನೆಯಲ್ಲಿ ತಾಯಿಯನ್ನ ಕೊಲೆ ಮಾಡಿದ ಪಾಪಿ ಮಗ ಗಂಗರಾಜು ನಂತರ ಕೊಲೆ ಮಾಡಿದ ಚಾಕುವಿನೊಂದಿಗೆ ಗ್ರಾಮದ ಕಡೆ ಹೊರಟಿದ್ದು ಗ್ರಾಮಸ್ಥರಿಗೆ ತಾಯಿಯನ್ನ ಕೊಂದಿದ್ದಾಗಿ ಹೇಳಿದ್ದಾನೆ. ಹೀಗಾಗೆ ಮನೆ ಬಳಿಗೆ ಬಂದು ನೋಡಿದ ಗ್ರಾಮಸ್ಥರಿಗೆ ರತ್ನಮ್ಮ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯ ಕಂಡು ಬಂದಿದ್ದು ಕೂಡಲೆ ದೊಡ್ಡಬಳ್ಳಾಫುರ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿ ಬಂದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತದೇಹವನ್ನ ಶವಾಗಾರಕ್ಕೆ ರವಾನಿಸಿದ್ದಾರೆ. ಇನ್ನೂ ತಾಯಿಯನ್ನ ಕೊಂದು ಗ್ರಾಮದಲ್ಲಿದ್ದ ಆರೋಫಿ ಮಗನನ್ನ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಿದ್ದಾರೆ. ಒಟ್ಟಾರೆ ಕಷ್ಟಾಪಟ್ಟು ದುಡಿದು ತಾಯಿಯನ್ನ ಸಾಕಿ ಸಲುಗಬೇಕಿದ್ದ ಬಾನೆತ್ತರದ ಮಗನೆ ಹಣಕಾಸಿನ ವಿಚಾರಕ್ಕೆ ಹೆತ್ತ ಕರುಳನ್ನೆ ಬರ್ಬರವಾಗಿ ಕೊಂದು ಕೊಲೆ ಮಾಡಿದ್ದು ಮಾತ್ರ ನಿಜಕ್ಕೂ ದುರಂತ.
ವರದಿ: ಮಂಜುನಾಥ್ ಟಿಎನ್ – ದೊಡ್ಡಬಳ್ಳಾಪುರ