ಬೆಂಗಳೂರು: ಮಾಲಿವುಡ್ ಆಯ್ತು ಈಗ ಕನ್ನಡ ಚಿತ್ರರಂಗದಲ್ಲಿ ಕಲಾವಿದೆಯರ ಮೇಲೆ ದೌರ್ಜನ್ಯದ ವಿಚಾರ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸೆಪ್ಟಂಬರ್ 16 ಸೋಮವಾರದಂದು ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲು ತೀರ್ಮಾನಿಸಲಾಗಿದೆ.
ಸೆಪ್ಟಂಬರ್ 16 ಸೋಮವಾರದಂದು ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲು ನಿರ್ಧರಿಸಿದ್ದು ಬೆಳಗ್ಗೆ 11.30ಕ್ಕೆ ವಾಣಿಜ್ಯ ಮಂಡಳಿಯಲ್ಲಿ ಸಭೆ ಹಾಗೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ನೇತೃತ್ವದಲ್ಲಿ ಸಭೆ ನಡೆಯಲಿದೆ.
ಚಿತ್ರರಂಗದ ಕಲಾವಿದೆಯರ ಜೊತೆ ಅಧ್ಯಕ್ಷೆ ಮಾತುಕತೆ ಆಡಲಿದ್ದು ಎದುರಿಸುತ್ತಿರುವ ಸಮಸ್ಯೆ, ಸೌಲಭ್ಯ, ಭದ್ರತೆಗಳು ಕುರಿತು ಮಾತುಕತೆಮೀಟಿಂಗ್ ರಿಪೋರ್ಟನ್ನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಲ್ಲಿಸಲಿರುವ ಆಯೋಗ ನಂತರ ರಾಜ್ಯದಲ್ಲೂ ಸಮಿತಿ ರಚನೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ.