ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಸಾವಿಗೆ ಕಾರಣವಾದ ಅಸಲಿ ಅಂಶ ಯಾವುದು? ಮಾರಾಕಾಸ್ತ್ರಗಳಿಂದ ಹೊಡೆದಿದ್ದಕ್ಕೆ ಸಾವು ಸಂಭವಿಸಿತಾ? ಇಂತಹ ಹಲವು ಪ್ರಶ್ನೆಗಳಿಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖವಾದ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ (Post Mortem Report) ಉತ್ತರ ಸಿಕ್ಕಿದೆ
ರೇಣುಕಾ ಸಾವಿಗೆ ಕಾರಣವೇನು?
ತೀವ್ರ ಆಘಾತ ಹಾಗೂ ಅತಿಯಾದ ರಕ್ತಸ್ರಾವದಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾನೆ. ತಲೆ ಸೇರಿ ದೇಹದ ಹಲವೆಡೆ ಆಳವಾದ, ಸೀಳಿದ ಗಾಯವಾಗಿದೆ.
ದೇಹದೆಲ್ಲೆಡೆ ಮೂಗೇಟು, ಜಜ್ಜಿದ ಹಾಗೂ ತರಚಲಾಗಿದ್ದು ತಲೆ, ಕುತ್ತಿಗೆ, ಕಿವಿ, ಕಣ್ಣಿನ ಭಾಗ, ಕೆನ್ನೆಯ ಬಲಭಾಗದಲ್ಲಿ ಗಾಯವಾಗಿದೆ.
ಎದೆ, 2 ಭುಜ, ಬೆನ್ನು, ಹೊಟ್ಟೆ, ವೃಷಣ ಭಾಗಕ್ಕೆ ಹೊಡೆಯಲಾಗಿದೆ. ಎಡಗೈ, ಎಡ ಭುಜ, ಮುಂಗೈ, ಕಾಲು, ಎದೆ ಮೇಲೆ ಸುಟ್ಟ ಗಾಯ ಕಂಡು ಬಂದಿದೆ. ತೊಡೆ, ಮೊಣಕಾಲು, ಹಿಮ್ಮಡಿ, ಕೈ ಬೆರಳು, ಕಾಲ್ಬೆರಳು ಮತ್ತು ಮೂಗಿಗೂ ಏಟು ಬಿದ್ದಿದೆ.