ಬಾಗಲಕೋಟೆ:- ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಬನಶಂಕರಿ ದೇವಿ ದೇವಸ್ಥಾನದ ಪಕ್ಕದಲ್ಲಿರುವ ಶಿವಪುರ ಗುಡ್ಡದಲ್ಲಿ ಜೂಜು ದಂಧೆ ನಡೆಯುತ್ತಿದೆ. ಪವಿತ್ರ ದೇವಸ್ಥಾನದ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬರ್ತಾರೆ. ಆದರೆ ಇಂತಹ ಪವಿತ್ರ ಸ್ಥಾನದಲ್ಲಿ ಅವ್ಯಾಹತವಾಗಿ ಜೂಜು ದಂಧೆ ನಡೆಯುತ್ತಿದೆ. ಗುಡ್ಡದಲ್ಲಿ ಒಂದು ಪೆಂಡಾಲ್ ಹಾಕಿ ಇಸ್ಪೀಟ್ ಆಡಿಸಲಾಗುತ್ತಿದೆ. ಮಧ್ಯಾಹ್ನ 2 ಗಂಟೆಯಿಂದ ಯಾವುದೇ ಅಳುಕಿಲ್ಲದೇ ಅಕ್ರಮ ದಂಧೆ ನಡೆಯುತ್ತಿದೆ.
ರಾಜ್ಯ ಸರ್ಕಾರದ ವಿರುದ್ಧ ಆರ್. ಅಶೋಕ್ ಬಾಂಬ್: 60 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ಚಿಂತನೆ!
ಪೊಲೀಸರು ಕೂಡ ಈ ಕಡೆ ಸುಳಿಯುವುದಿಲ್ಲ. ಹೀಗಾಗಿ ಯಾವುದೇ ಭಯವಿಲ್ಲದೆ ಬೆಟ್ಟಿಂಗ್ ಕಟ್ಟಿ ಇಸ್ಪೀಟ್ ಆಡಲಾಗುತ್ತಿದೆ.
ಜಿಲ್ಲೆ ಬಾದಾಮಿ ತಾಲೂಕಿನ ಬನಶಂಕರಿ ದೇವಸ್ಥಾನದ ಪಕ್ಕದ ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಶಿವಪುರ ಗ್ರಾಮದ ಶಿವಪುರ ಗುಡ್ಡದಲ್ಲಿ ಇದೇ ಗ್ರಾಮದ ಪಾಂಡು ಎಂಬ ವ್ಯಕ್ತಿ ಈ ಇಸ್ಪೇಟ್ ದಂಧೆಯನ್ನು ನಡೆಸುತ್ತಿದ್ದಾನೆ. ಯಾವ ಕ್ಯಾಸಿನೋಗೆ ಕಡಿಮೆ ಇಲ್ಲದಂತೆ ಇಸ್ಪೀಟ್ ದಂಧೆ ನಡೆಯುತ್ತಿದೆ. ಜೂಜುಕೋರರಿಗೆ ಪಾಂಡು ಮೀಟರ್ ಬಡ್ಡಿಯನ್ನೂ ನೀಡ್ತಾನೆ. ಅಷ್ಟೇ ಅಲ್ಲದೆ ಇಲ್ಲಿ ಇಸ್ಪೇಟ್ ಆಡಲು ಬೇರೆ ಬೇರೆ ಜಿಲ್ಲೆಗಳಿಂದ ಜನ ಬರ್ತಾರೆ. ಇಸ್ಪೀಟ್ ಆಡಲು ಬರುವ ಜನರನ್ನು ಕರೆಯಲು ಆಟೋ ವ್ಯವಸ್ಥೆ ಸಹ ಮಾಡಲಾಗಿದೆ. ನೂರಾರು ಜೂಜುಕೋರರು ಸೇರಿಕೊಂಡು ಭರ್ಜರಿಯಾಗಿ ಇಸ್ಪೇಟ್ ದಂಧೆ ನಡೆಸುತ್ತಿದ್ದಾರೆ. ಇಷ್ಟೆಲ್ಲ ಅಕ್ರಮ ನಡೆಯುತ್ತಿದ್ರೂ, ಪೊಲೀಸ್ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.