ಬೆಂಗಳೂರು: 60 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ವಿಪಕ್ಷ ನಾಯಕ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ.
SSLC ವಿದ್ಯಾರ್ಥಿಗಳು ನೋಡಲೇಬೇಕಾದ ಸ್ಟೋರಿ: SSLC ಮುಖ್ಯ ಪರೀಕ್ಷೆಯಂತೆ ಮಧ್ಯವಾರ್ಷಿಕ ಪರೀಕ್ಷೆ..!
ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಗ್ಯಾರಂಟಿಗಳಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ ಇದೀಗ ಅಕ್ರಮ ಬಿಪಿಎಲ್ ಪಡಿತರದಾರರಿಗೆ ಚಾಟಿ ಬೀಸಲು ಮುಂದಾಗಿದೆ. ಇದನ್ನೇ ಈಗ ಬಿಜೆಪಿ ಅಸ್ತ್ರ ಮಾಡ್ಕೊಂಡಿದೆ. 60 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ ಮಾಡ್ಕೊಂಡಿದೆ ಎಂದು ಅಶೋಕ್ ಆರೋಪಿಸಿದ್ದಾರೆ.
ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಹಲವು ಕಠಿಣ ನಿಬಂಧನೆ ಹಾಕಲು ಮುಂದಾಗಿದೆ. ಗುಡಿಸಲಿನಲ್ಲಿದ್ದವರಿಗೆ ಮಾತ್ರ ಗ್ಯಾರಂಟಿಗಳು ಸಿಗಬೇಕು ಅಂತ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡ್ತಿದ್ದಾರೆ ಅಂತ ದೂರಿದ್ದಾರೆ.
ಸಿದ್ದರಾಮಯ್ಯ ಸರ್ಕಾರ (Siddaramaiah’s Government) ಪಾಪರ್ ಆಗಿದೆ. ತೆರಿಗೆ ಹೆಚ್ಚಿಸಿದ್ರೂ ಸಂಬಳ ಕೊಡೋಕೆ ಆಗ್ತಿಲ್ಲ. ನಮ್ಮ ರಾಜ್ಯವೂ ಹಿಮಾಚಲದ ಸ್ಥಿತಿ ತಲುಪಿದೆ ಎಂದು ಲೇವಡಿ ಮಾಡಿದ್ರು. ಅಂದ ಹಾಗೇ, ಗೃಹಲಕ್ಷ್ಮಿ ಹಣ ಕಳೆದ ಎರಡ್ಮೂರು ತಿಂಗಳಿಂದ ರಿಲೀಸ್ ಆಗಿಲ್ಲ. ಶೀಘ್ರವೇ ಬಿಡುಗಡೆ ಮಾಡಲಾಗುತ್ತೆ ಎಂದು ಸಚಿವೆ ಹೆಬ್ಬಾಳ್ಕರ್ ತಿಳಿಸಿ ಒಂದು ವಾರ ಕಳೆದಿದೆ. ಆದ್ರೂ, ಯಾರ ಖಾತೆಗೂ ಗೃಹಲಕ್ಷ್ಮಿ ಹಣ ಬಿದ್ದಿಲ್ಲ ಎಂದು ಲೇವಡಿ ಮಾಡಿದ್ದಾರೆ.