ಬೆಂಗಳೂರು:- ಪ್ರಜ್ವಲ್ ರೇವಣ್ಣಗೆ ಬಿಗ್ ಶಾಕ್ ಎದುರಾಗಿದ್ದು, ಮಾಜಿ ಸಂಸದರ ವಿರುದ್ಧ 1,632 ಪುಟಗಳ ಮತ್ತೊಂದು ಚಾರ್ಜ್ಶೀಟ್ ಅನ್ನು ಎಸ್ಐಟಿ ಸಲ್ಲಿಸಿದೆ.
ದೇವರ ಮೆರವಣಿಗೆಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: ಬಿಜೆಪಿ ಕಾರ್ಯಕರ್ತನ ವಿರುದ್ಧ FIR ದಾಖಲು!
113 ಸಾಕ್ಷಿಗಳನ್ನು ಒಳಗೊಂಡ 1,632 ಪುಟಗಳ ಚಾರ್ಜ್ಶೀಟ್ ಅನ್ನು ತನಿಖಾಧಿಕಾರಿ ಶೋಭಾರಿಂದ ಸಲ್ಲಿಕೆ ಮಾಡಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಕೇಸ್ಗೆ ಸಂಬಂಧಿಸಿದಂತೆ ಇತ್ತೀಗೆಚೆ ಎಸ್ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಒಳಗೊಂಡ ಸುಮಾರು 2 ಸಾವಿರ ಪುಟಗಳ ಚಾರ್ಜ್ಶೀಟ್ನ್ನು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಸಲ್ಲಿಸಿದ್ದರು. ಇದೀಗ ಸೋಮವಾರದಂದು ಎರಡನೇ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳನ್ನು ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸದ್ಯ ಪ್ರಜ್ವಲ್ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದಾರೆ. ಮೇ 30 ರಂದು ಜರ್ಮನಿಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಜ್ವಲ್ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದರು.
ಆರೋಪ ಕೇಳಿಬರ್ತಿದ್ದಂತೆ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ನಂತ್ರ ಎಸ್ಐಟಿ ಮುಂದೆ ವಿಚಾರಣೆ ಎದುರಿಸಿದ್ದರು. ಪ್ರಜ್ವಲ್ನ ಕರ್ಮಕಾಂಡಗಳು ಚಾರ್ಜ್ಶೀಟ್ ಮೂಲಕ ಬಯಲಾಗಿದ್ದವು.
ಬಸವನಗುಡಿ ಮನೆಯಲ್ಲಿ ಪ್ರಜ್ವಲ್ ಅತ್ಯಾಚಾರ ಎಸಗಿದ್ದರು. ಮನೆ ಕ್ಲೀನ್ ಮಾಡಲು ಬಂದಿದ್ದಾಕೆ ಮೇಲೆ ಎರಗಿದ್ದ. ಕ್ಲೀನ್ ಮಾಡಲೆಂದು ಮನೆಗೆ ಬಂದಿದ್ದ ಮಹಿಳೆ ಮೇಲೆ, ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದಾಗ ಅತ್ಯಾಚಾರ ಎಸಗಿದ್ದರು. ರೇಪ್ ಬಳಿಕ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದರು. ಯಾರಿಗೂ ಹೇಳದಂತೆ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರಂತೆ. ಯಾರಿಗಾದ್ರೂ ಹೇಳಿದ್ರೆ ನಿನ್ನ ಪತಿಯನ್ನು ಜೈಲಿಗೆ ಕಳಿಸುವುದಾಗಿ ಬೆದರಿಸಿದ್ದರು.