ಫೈರ್ ಫ್ಲೈ’ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಸಿನಿಮಾ. ಯುವ ಪ್ರತಿಭೆ ವಂಶಿ ನಟಿಸಿ, ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಝಲಕ್ ರಿಲೀಸ್ ಆಗಿದೆ. ವಿಕ್ಕಿಯಾಗಿ ನಾಯಕ ವಂಶಿಯನ್ನು ಫೈರ್ ಫ್ಲೈ ಬಳಗ ಸಿನಿಮಾಪ್ರೇಮಿಗಳಿಗೆ ಪರಿಚಯಿಸಿದೆ.
ವಿವೇಕಾನಂದ ಎಂದು ಪರಿಚಯಿಸಿಕೊಳ್ಳುವ ನಾಯಕ ತಾನೊಬ್ಬ ಅವಾರ್ಡ್ ವಿನ್ನಿಂಗ್ ಮ್ಯಾಥ್ಸ್ ಟೀಚರ್ ಎಂದು ಹೇಳಿಕೊಳ್ಳುತ್ತಾನೆ. ವಿಕ್ಕಿ ಪ್ರಪಂಚದಲ್ಲಿ ಬೆಳಿಗ್ಗೆ 7, ಮಧ್ಯಾಹ್ನ 1 ಮತ್ತು ರಾತ್ರಿ 8 ಗಂಟೆಗೆ ಏನ್ ನಡೆಯುತ್ತದೆ. ವಿಕ್ಕಿ ವಿಚಿತ್ರ ವರ್ತನೆಯನ್ನು ಸಖತ್ ಫನ್ನಿಂಯಾಗಿ ಕಟ್ಟಿಕೊಡಲಾಗಿದೆ. 2 ನಿಮಿಷ 49 ಸೆಕೆಂಡ್ ಇರುವ ಫೈರ್ ಫ್ಲೈ ಟೀಸರ್ ಕುತೂಹಲದಿಂದ ಕೂಡಿದ್ದು, ವಿಕ್ಕಿ ಯಾರು ಅನ್ನೋದನ್ನು ಹೇಳಿರುವ ಚಿತ್ರತಂಡ ಅಸಲಿಗೆ ಯಾಕೆ ವಿಚಿತ್ರವಾಗಿ ವರ್ತನೆ ಮಾಡ್ತಾನೆ ಅನ್ನೋದರ ಗುಟ್ಟುಬಿಟ್ಟು ಕೊಟ್ಟಿಲ್ಲ.
ವಂಶಿ ನಾಯಕನಾಗಿ ನಿರ್ದೇಶಕನಾಗಿ ಮಿಂಚಿದ್ದು, ತಾಂತ್ರಿಕವಾಗಿ ಟೀಸರ್ ಶ್ರೀಮಂತಿಕೆಯಿಂದ ಕೂಡಿದೆ. ಚಿತ್ರದ ಫ್ರೇಮ್, ಕಲರಿಂಗ್, ಕಂಟೆಂಟ್, ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗದೆ ಒಳ್ಳೆ ಔಟ್ ಫುಟ್ ನೀಡಲಾಗಿದೆ. ಚರಣ್ ರಾಜ್ ಸಂಗೀತ, ಅಭಿಲಾಷ್ ಕಳತ್ತಿ ಕ್ಯಾಮೆರಾವರ್ಕ್ ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರುಮುಗಂ ಸಂಕಲನ ಫೈರ್ ಫ್ಲೈ ಟೀಸರ್ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.
ಫೈರ್ ಫ್ಲೈ ನಾಯಕನಾಗಿ ಅಭಿನಯಿಸಿರುವ ವಂಶಿಗೆ ಜೋಡಿಯಾಗಿ ರಚನಾ ಇಂದರ್, ಉಳಿದಂತೆ ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಮೂಗು ಸುರೇಶ್, ಚಿತ್ಕಲಾ ಬಿರಾದಾರ್, ಸಿಹಿ ಕಹಿ ಚಂದ್ರು ತಾರಾಬಳಗದಲ್ಲಿದ್ದಾರೆ.ಈ ಸಿನಿಮಾವನ್ನು ಶ್ರೀ ಮುತ್ತು ಸಿನಿ ಸರ್ವಿಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ಕೂಡ ಕೊಡಲು ಮುಂದಾಗಿದೆ.
ಫೈರ್ ಫ್ಲೈ ಮೂಲಕವೇ ನಿರ್ದೇಶಕ ವಂಶಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ. ಇವರ ಮೊದಲ ಪ್ರಯತ್ನದ ಬಗ್ಗೆ ಟಾಕ್ ಇದ್ದೇ ಇದೆ. ಚಿತ್ರದ ಮೊದಲ ಝಲಕ್ ನಲ್ಲಿ ಫನ್-ಎಮೋಷನ್, ಎಂಟರ್ ಟೈನ್ಮೆಂಟ್ ಎಲ್ಲವೂ ಇದೆ. ಶೂಟಿಂಗ್ ಮುಗಿಸಿರುವ ಚಿತ್ರತಂಡ ಈ ವರ್ಷಾಂತ್ಯಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.