ಬೆಂಗಳೂರು: ಜೈಲಿನಲ್ಲಿ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಹಿನ್ನೆಲೆಯಲ್ಲಿ ಇಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಗುಪ್ತಾ ಹಾಗೂ ಕಾರಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ನೇತೃತ್ವದಲ್ಲಿ ಸಭೆ ನಡೆಸಲಾಗುತ್ತದೆ.
ದರ್ಶನ್ ಹಾಗೂ ಅಧಿಕಾರಿಗಳ ವಿರುದ್ದ ದಾಖಲಾಗಿದ್ದ ಮೂರು ಎಫ್ಐಆರ್ ದಾಖಲಾಗಿದ್ದು ಪ್ರಕರಣವನ್ನ ಹೆಚ್ಚಿನ ತನಿಖೆಗಾಗಿ ತನಿಖೆಯ ಜವಾಬ್ದಾರಿಯನ್ನ ಸಿಸಿಬಿ ಮುಖ್ಯಸ್ಥರಿಗೆ ನೀಡಲಾಗಿತ್ತು.ದರ್ಶನ್ ಗೆ ರಾಜಾತಿಥ್ಯ ವ್ಯವಸ್ಥೆ ಮಾಡಿದವರ್ಯಾರು, ಯಾರು ಕರ್ತವ್ಯದಲ್ಲಿದ್ರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಇಂದು ಡಿಸಿಪಿ ಸಾರಾ ಫಾತಿಮ ಅವ್ರು ನಡೆಸಿರುವ ತನಿಖೆ ಬಗ್ಗೆ ಪರಿಶೀಲನೆ ನಡೆಸಿ ಚರ್ಚೆ ಮಾಡಲಿರೋ ಪೊಲೀಸ್ರು ಹಾಗೂ ಕಾರಗೃಹ ಅಧಿಕಾರಿಗಳು.