ಬೆಂಗಳೂರು:– ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳ ಆಗುತ್ತಿದ್ದು,ಮತ್ತೊಂದು ದೆಹಲಿ ಆಗುತ್ತಾ ಬೆಂಗಳೂರು ಎಂಬೆಲ್ಲಾ ಅನುಮಾ ಮೂಡಿದೆ.
ಮತ್ತೆ ಒಂದಾಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಚಂದನ್, ನಿವೇದಿತಾ ಗೌಡ
ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಟ ಬರೋಬ್ಬರಿ 5 ಸಾವಿರ ನೂತನ ವಾಹನಗಳು ನೋಂದಣಿಯಾಗ್ತಿದ್ದಾವೆ. ಅಂದ್ರೆ, ತಿಂಗಳಿಗೆ ಒಂದೂವರೆ ಲಕ್ಷ ಹಾಗೂ ವರ್ಷಕ್ಕೆ 18 ಲಕ್ಷ ವಾಹನಗಳು ಹೊಸದಾಗಿ ರಾಜ್ಯದ ರಸ್ತೆಗೆ ಇಳಿಯುತ್ತಿವೆ. ಕಳೆದ ವರ್ಷಕ್ಕಿಂತ ಈ ವರ್ಷ ನೋಂದಣಿ ಆಗಿರೋ ವಾಹನಗಳ ಪ್ರಮಾಣದಲ್ಲಿ ಶೇ. 6.5ರಷ್ಟು ಏರಿಕೆಯಾಗಿದೆ ಈ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
HSR ಲೇಔಟ್ ಭಾಗದಲ್ಲಿ 21 ರಿಂದ 22ನೇ ಇಸವಿಯಲ್ಲಿ 79.8.%, 2022 ರಿಂದ 2023ರಲ್ಲಿ- 93.8 ಶೇಕಡ, 23 ರಿಂದ 24 ಆಗಸ್ಟ್ ವರೆಗೆ 92.0 ಶೇಕಡ ವಾಹನ ಖರೀದಿ ಹೆಚ್ಚಳವಾಗಿದೆ.
ಕವಿಕಾ ಸ್ಟೇಷನ್- 2021-2022ನಲ್ಲಿ 73.9%, 2022-2023ನಲ್ಲಿ 83.2%, 2023ರಿಂದ 2024 ಆಗಸ್ಟ್ ವರೆಗೆ 73.7% ಇದೆ.
ಸಿಟಿ ರೈಲ್ವೆ ಸ್ಟೇಷನ್- 2021-2022ರಲ್ಲಿ68.%, 2022-2023ರಲ್ಲಿ -77.6%, 2023ರಿಂದ 2024ರ ಆಗಸ್ಟ್ ವರೆಗೆ 71.9%.
ಹೆಬ್ಬಾಳ ವೆಟರ್ನರಿ ಕಾಲೇಜು ಸ್ಟೇಷನ್- 2021-2022ರಲ್ಲಿ63.5%, 2022-2023ರಲ್ಲಿ64.4%, 2023ರಿಂದ 2024ರ ಆಗಸ್ಟ್ ವರೆಗೆ 62.9%.
ಶಾಲಿನಿ ಗ್ರೌಂಡ್ ಸ್ಟೇಷನ್- 2021-2022ರಲ್ಲಿ 60.8%, 2022-2023ರಲ್ಲಿ 67.1%,
2023ರಿಂದ 2024ರ ಆಗಸ್ಟ್ ವರೆಗೆ 79.6%.
ಇನ್ನೂ ದೆಹಲಿಯಲ್ಲಿ ಹದಿನೈದು ವರ್ಷ ಮೇಲ್ಪಟ್ಟ ಪೆಟ್ರೋಲ್ ವಾಹನಗಳು, ಹತ್ತು ವರ್ಷ ಮೇಲ್ಪಟ್ಟ ಡಿಸೇಲ್ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಹದಿನೈದು ವರ್ಷ ಮೇಲ್ಪಟ್ಟ ಸರ್ಕಾರಿ ಮತ್ತು ನಿಗಮ ಮಂಡಲಿಗಳ ವಾಹನಗಳನ್ನು ಮಾತ್ರ ಕಡ್ಡಾಯವಾಗಿ ಗುಜರಿಗೆ ಹಾಕಬೇಕು ಅನ್ನೋ ರೂಲ್ಸ್ ಇದೆ. ಬೇರೆ ಯಾವುದೇ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ರೂಲ್ಸ್ ಇಲ್ಲ ಹಾಗಾಗಿ 10-15 ವರ್ಷ ಮೇಲ್ಪಟ್ಟ ವಾಹನಗಳಿಂದ ಹೆಚ್ಚಿನ ವಾಯುಮಾಲಿನ್ಯ ಆಗುತ್ತಿದೆ.