ಬಂಗಾರ ಭೂಮಿಯಲ್ಲೇ ಸೃಷ್ಟಿಯಾದದ್ದಂತೂ ಅಲ್ಲ, ಧರೆಯಲ್ಲೇ ಬಂಗಾರ ಸೃಷ್ಟಿಗೊಳ್ಳುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ. ಬಂಗಾರ ಪೃಥ್ವಿಯಲ್ಲಿ ಮಾತ್ರವೇ ಇರುವ ವಸ್ತುವೂ ಏನಲ್ಲ. ಘನ ತನುವಿನ ಯಾವುದೇ ಅಂತರಿಕ್ಷ ಕಾಯದಲ್ಲೂ ಎಂದರೆ ಗ್ರಹ, ಉಪಗ್ರಹ, ಕ್ಷುದ್ರ ಗ್ರಹ, ಕುಬ್ಜಗ್ರಹಗಳಲ್ಲೂ ಬಂಗಾರ ಇದ್ದೇ ಇದೆ.
ಭಾರತೀಯ ಮಹಿಳೆಯರಿಗಂತು ಚಿನ್ನದ ಮೇಲೆ ಬಗಳ ವ್ಯಾಮೋಹವಿದೆ. ಕಿವಿ, ಮೂಗು, ಕೈ, ಕುತ್ತಿಗೆ ಹೋಗೆ ಚಿನ್ನವನ್ನ ಆಭರಣಗಳ ರೂಪದಲ್ಲಿ ಬಳಸುತ್ತಾರೆ. ಆದರೆ ಈ ಚಿನ್ನವು ನಿಜವಾಗಿಯೂ ಭೂಮಿಗೆ ಹೇಗೆ ಬಂದಿತು ಎಂದು ಅನೇಕ ಜನರಿಗೆ ತಿಳಿದಿಲ್ಲ?
ಆದರೆ ಮೂಲ ಚಿನ್ನವು ಭೂಮಿಗೆ ಹೇಗೆ ಬಂದಿತು ಎಂಬುದು ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆ. ಇತ್ತೀಚಿನ ಅಧ್ಯಯನವೊಂದು ಇದಕ್ಕೆ ಸ್ಪಷ್ಟ ಉತ್ತರ ನೀಡಿದೆ. ಇದು ಹಿಂದೆ ಬಂದ ಅಧ್ಯಯನಗಳಿಗಿಂಥ ವಿಭಿನ್ನವಾಗಿ ವರದಿ ನೀಡಿದೆ.
ಭೂಮಿಯ ಹೊರಪದರದಲ್ಲಿನ ಬಿರುಕುಗಳ ಮೂಲಕ ಹರಿಯುವ ಶಾಖ, ಖನಿಜಗಳ ಸಮೃದ್ಧವಾಗಿರುವ ದ್ರವಗಳಿಂದ ರೂಪುಗೊಳ್ಳುತ್ತದೆ. ಈ ದ್ರವ ತಣ್ಣಗಾದಾಗ ಚಿನ್ನದ ಅದಿರಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದ್ದವು.
ಭೂಮಿಯ ರಚನೆಯ ಸಮಯದಲ್ಲಿ, ಚಂದ್ರನ ಗಾತ್ರದ ಬೃಹತ್ ಗ್ರಹಗಳ ತುಣುಕು ಭೂಮಿಗೆ ಡಿಕ್ಕಿ ಹೊಡೆದು ಅದರೊಳಗೆ ನುಗ್ಗಿತು. ಅದರ ನಂತರ, ವಿಜ್ಞಾನಿಗಳು ಇತ್ತೀಚಿನ ಸಂಶೋಧನೆಯಲ್ಲಿ ಚಿನ್ನದ ಮತ್ತು ಪ್ಲಾಟಿನಂನಂತಹ ಲೋಹಗಳು ಭೂಮಿಯ ಒಳಭಾಗದಲ್ಲಿ ವಿವಿಧ ಪ್ರಕ್ರಿಯೆಗಳಿಂದ ರೂಪುಗೊಂಡವು ಎಂದು ತಿಳಿಸಿದ್ದಾರೆ.
ಚಿನ್ನ ಮತ್ತು ಪ್ಲಾಟಿನಂನಂತಹ ಅಮೂಲ್ಯ ಲೋಹಗಳ ರಚನೆಯಲ್ಲಿ ಭೂಮಿಗೆ ಅಪ್ಪಳಿಸುವ ಬೃಹತ್ ತುಣುಕುಗಳ ಪಾತ್ರವನ್ನು ನಮ್ಮ ಸಂಶೋಧನೆ ಸ್ಪಷ್ಟಪಡಿಸಿದೆ. ಭೂಮಿಯಲ್ಲಿರುವ ಲೋಹಗಳ ಪ್ರಮಾಣವು ಈ ಹಿಂದೆ ಅಂದಾಜಿಸಲಾಗಿದ್ದಕ್ಕಿಂತ ಎರಡರಿಂದ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ ತಿಳಿಸಿತ್ತು. ಈ ಸಂಶೋಧನೆಯ ವಿವರಗಳನ್ನು ನೇಚರ್ ಜಿಯೋಸೈನ್ಸ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ.
ಡಾ. ಕ್ರಿಸ್ ವೋಯ್ಸಿ ನೇತೃತ್ವದ ಇತ್ತೀಚಿನ ಅಧ್ಯಯನದ ಪ್ರಕಾರ, ಭೂಕಂಪಗಳು ಕ್ವಾರ್ಟ್ಜ್ ಒಳಗೆ ಪೀಜೋಎಲೆಕ್ಟ್ರಿಸಿಟಿಯನ್ನು ಉತ್ಪಾದಿಸುವ ಮೂಲಕ ಚಿನ್ನದ ಗಟ್ಟಿಗಳ ರಚನೆಯನ್ನು ಪ್ರಚೋದಿಸಬಹುದು ಎಂದು ವಿವರಿಸಿದೆ.