ಧಾರವಾಡ:- 3 ವರ್ಷದ ಹಿಂದೆ ಸಾವಾಗಿ ಅಸ್ಥಿಪಂಜರ ಸಿಕ್ಕ ವ್ಯಕ್ತಿಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದೀಗ ಕೊಲೆ ಆರೋಪ ಮಾಡಲಾಗಿದೆ.
ಕಡುಕಪ್ಪಾದ ಕೂದಲು ನಿಮ್ಮದಾಗಬೇಕಾ!? 1 ತಿಂಗಳು ಹುಣಸೆ ರಸ ಈ ರೀತಿ ಬಳಸಿ!
ತನ್ನ ಪುತ್ರನು ಅನಾರೋಗ್ಯದಿಂದ ಸಾವಾಗಿಲ್ಲ. ಇದು ಕೊಲೆ ಎಂದು ಶಂಖೆ ವ್ಯಕ್ತಪಡಿಸಿ, ಮೂವರ ಮೇಲೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಮೃತ ಚಂದ್ರಶೇಖರ್ ತಾಯಿ ದೂರು ದಾಖಲಿಸಿದ್ದಾರೆ.
ಕಳೆದ ತಿಂಗಳು ಜುಲೈ 13 ಕ್ಕೆ ಧಾರವಾಡ ವಿದ್ಯಾಗಿರಿ ಠಾಣೆ ಪೊಲೀಸರು, ಕಾಣೆಯಾದ ವ್ಯಕ್ತಿಯ ದೂರಿನ ತನಿಖೆಯ ಭಾಗವಾಗಿ ಧಾರವಾಡ ಮಾಳಮಡ್ಡಿಯಲ್ಲಿನ ಮನೆಯೊಂದರ ಬಾಗಿಲು ಮುರಿದು ನೋಡಿದ್ದರು. ಅಲ್ಲಿ ಆ ಮನೆ ಮಾಲೀಕ ಮಲಗಿದಲ್ಲಿಯೇ ಸತ್ತು ಅಸ್ಥಿಪಂಜರವಾಗಿದ್ದು ಪತ್ತೆಯಾಗಿತ್ತು. ಆ ವ್ಯಕ್ತಿ ಚಂದ್ರಶೇಖರ ಕೊಲ್ಲಾಪುರ ಎಂದು ಗುರುತಿಸಲಾಗಿತ್ತು.
ಮೃತನ ಪತ್ನಿಯ ಸೋದರಿಯ ಮಗ ರಾಣೇಬೆನ್ನೂರಿನ ಯಶವಂತ ಪಾಟೀಲ ಎಂಬಾತನೇ ಈ ಚಂದ್ರಶೇಖರ್ ಕಾಣೆಯಾದ ಬಗ್ಗೆ ಠಾಣೆಯಲ್ಲಿ ದೂರು ದಾಖಲಿಸಿದ್ದ. ಕೋವಿಡ್ ಅವಧಿಯಲ್ಲಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಆತ ಹೇಳಿಕೊಂಡಿದ್ದ. ತನ್ನ ಚಕ್ಕಪ್ಪನಿಗೆ ತಾನು ಬಿಟ್ಟರೆ ಬೇರೆ ಯಾರೂ ಸಂಬಂಧಿಗಳೇ ಇಲ್ಲ ಎಂದು ಹೇಳಿ ಎಲ್ಲ ಕ್ರಿಯೆಗಳನ್ನು ಪೂರ್ಣಗೊಳಿಸಿದ್ದ.
ಮೃತನ ತಾಯಿ ಮಲ್ಲವ್ವ ದಾಖಲಿಸಿರುವ ದೂರಿನಲ್ಲಿ ಮೂವರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಅದರಲ್ಲಿ ಈ ಹಿಂದೆ ತನ್ನ ಚಿಕ್ಕಪ್ಪ ಕಾಣೆಯಾಗಿದ್ದಾನೆಂದು ದೂರು ದಾಖಲಿಸಿದ್ದ ಯಶವಂತ ಪಾಟೀಲ, ಸೇರಿದಂತೆ ಅಸ್ಥಿಪಂಜರ ಸಿಕ್ಕ ಮನೆಯ ಪಕ್ಕದಲ್ಲಿಯೇ ಅದೇ ಆಸ್ಥಿಗೆ ಸಂಬಂಧಿಸಿ ಹಲವಾರು ವರ್ಷಗಳಿಂದ ಮನೆಯಲ್ಲಿ ಭೋಗ್ಯದಲ್ಲಿರೋ ಶಹಾಬುದ್ದೀನ್ ಬಳ್ಳಾರಿ ಹಾಗೂ ಮೃತನ ಪತ್ನಿಯ ಇನ್ನೋರ್ವ ಸೋದರಿ ಸಾಂಗ್ಲಿಯ ವಿನೋದಾ ಉತ್ತಪ್ಪನ್ ವಿರುದ್ಧ ಸಂಶಯ ವ್ಯಕ್ತಪಡಿಸಿದ್ದಾರೆ.