ಹುಬ್ಬಳ್ಳಿ:-ಕೇಂದ್ರದ ಮೇಲೆ ದೂಷಿಸುತ್ತಿದ್ದ ಕಾಂಗ್ರೆಸ್ ಸರ್ಕಾರ ಅಕ್ಕಿ ಖರೀದಿಗೆ ಮುಂದಾಗುತ್ತಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡುತ್ತೇವೆ ಅಂದ್ರೂ ಖರೀದಿಸುತ್ತಿಲ್ಲ. ಕರ್ನಾಟಕ ಸರ್ಕಾರ ಅಕ್ಕಿ ಖರೀದಿಸಲು ಮುಂದಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಚಿವ ಮುನಿಯಪ್ಪ ಬಂದು ಅಕ್ಕಿ ಕೊಡುತ್ತೀರಾ ಅಂದ್ರು, ಕೊಡುತ್ತೇವೆ ಅಂದೆವು. ಆದರೆ ಸಿಎಂ ಅನುಮತಿ ಕೊಟ್ಟಿಲ್ಲ, ಏಕೆ ಕೊಟ್ಟಿಲ್ಲ ಎಂದು ಮುನಿಯಪ್ಪ ಹೇಳಬೇಕು. ಸಚಿವ ಮುನಿಯಪ್ಪನವರು ಹಿರಿಯರು, ಅವರ ಬಗ್ಗೆ ಗೌರವವಿದೆ ಎಂದಿದ್ದಾರೆ.
ಮಹದಾಯಿ ವಿಚಾರವಾಗಿ ಮಾತನಾಡಿದ್ದು, ರೈತರು ಮನವಿ ಕೊಟ್ಟಿದ್ದಾರೆ. ಇದು ಜುಲೈನಲ್ಲಿ ನಡೆದ ಸಭೆ ನಮ್ಮ ಗಮನಕ್ಕೆ ಬಂದಿಲ್ಲ. ಮಹದಾಯಿ ವಿಚಾರದಲ್ಲಿ ತಪ್ಪು ದಾರಿಗೆ ಎಳೆಯೋ ಪ್ರಯತ್ನ ಮಾಡಲಾಗುತ್ತಿದೆ. ಕೇವಲ ಗೋವಾಕ್ಕೆ ಅಲ್ಲ, ದಾಬೋಲ್ದಿಂದ ಯೋಜನೆ ಇದೆ. ಇದು ಎಲ್ಲರಿಗೂ ಅನಕೂಲವಾಗುವ ಯೋಜನೆ ಎಂದು ಹೇಳಿದ್ದಾರೆ.