ಬಾಗಲಕೋಟೆ: ಚೌತಿ ಗಣಪತಿ ಪ್ರಸಾದ ಪರೀಕ್ಷೆ ಮಾಡಿ ವಿತರಣೆ ವಿಚಾರಕ್ಕೆ, ಹಿಂದೂ ದೇವರುಗಳಿಗೆ ಅಪಮಾನ ಮಾಡಬೇಡಿ. ಸಿಎಂಗೆ ಯಾಕೆ ಹಿಂದೂಗಳ ಬಗ್ಗೆ ನಿಕೃಷ್ಠ ಭಾವನೆ. ಕಾನೂನಿಗೆ ಅಪಮಾನ ಮಾಡಬೇಡಿ ಎಂದು ಕೆಎಸ್ ಈಶ್ವರಪ್ಪ ಸಿಎಂ ಸಿದ್ದರಾಮಯ್ಯ ವಿರುದ್ಧ ಗರಂ ಆಗಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಮಾತ್ರವಲ್ಲ ದೇಶದ ತುಂಬೆಲ್ಲ ಗಣಪತಿ ಕೂರಿಸಲಾಗುತ್ತದೆ. ಗಣಪತಿ ಪ್ರಸಾದ ಕೊಡಬೇಕಾದರೆ ಆಹಾರ ಇಲಾಖೆ ಪರೀಕ್ಷೆ ಮಾಡಬೇಕಂತೆ. ಸಿದ್ದರಾಮಯ್ಯ ಹುಟ್ಟೋ ಮುಂಚೆಯಿಂದಲೂ ದೇಶದಲ್ಲಿ ಗಣಪತಿ ಕೂರಿಸುತ್ತಿದ್ದರು. ಕಾಂಗ್ರೆಸ್ ಪಕ್ಷ ಹುಟ್ಟೋಕಿಂತ ಮುಂಚೆ ದೇಶದಲ್ಲಿ ಗಣಪತಿ ಇಡಲಾಗುತ್ತಿದೆ. ಈಗ ಸರ್ಕಾರ ಹೊಸ ವ್ಯವಸ್ಥೆ ಮಾಡಿಕೊಳ್ಳುತ್ತಿದೆ ಎಂದರು.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ಪ್ರಸಾದ ಪರೀಕ್ಷೆ ಮಾಡಿ ನೀಡುವ ಕಾನೂನು ತಂದಿದ್ದಾರೆ. ಹಿಂದೂ ಧರ್ಮದ ಬಗ್ಗೆ ಇಷ್ಟು ಕೀಳುಮಟ್ಟದ ರಾಜಕಾರಣ ಕಾಂಗ್ರೆಸ್ನವರು ಯಾಕೆ ಮಾಡುತ್ತಿದ್ದಾರೆ. ನೀವು ಮಸೀದಿ, ಚರ್ಚ್ ಗಳಲ್ಲಿ ತಿನ್ನುವ ಪದಾರ್ಥಗಳ ಪರೀಕ್ಷೆ ಮಾಡಿದ್ದೀರಾ? ಎಂದು ಪ್ರಶ್ನಿಸಿದರು.