ವಿಜಯನಗರ: ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದ ಯುವಕ ನೀರಿನ ರಭಸಕ್ಕೆ ಕೊಚ್ಚಿ ಹೋಗ್ತಿದ್ದನು ಕಂಡು ಸ್ಥಳಿಯರು ರಕ್ಷನೆ ಮಾಡಿದ್ದಂತಹ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಮಾರ್ಗವಾಗಿ ಹರಿದು ಹೋಗುವ ತುಂಗಭದ್ರಾ ಜಲಾಶಯದ LLC ಕಾಲುವೆಯಲ್ಲಿ ನಡೆದಿದೆ.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ತಮಿಳುನಾಡು ಮೂಲದ ಯುವಕ ದೇವಸ್ಥಾನಕ್ಕೆ ಬಂದಿದ್ದನು. ಈ ವೇಳೆ ಸ್ನಾನ ಮಾಡಲೆಂದು ನೀರಿಗೆ ಇಳಿದಿದ್ದನು. ನೀರಿನ ರಭಸಕ್ಕೆ ಒಂದಿಷ್ಟು ದೂರ ಹಾದು ಹೋದ ಯುವಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಗಾಬರಿಗೊಂಡ ಯುವಕನಿಗೆ ಸ್ಥಳೀಯರು ಧೈರ್ಯ ತುಂಬಿದ್ದಾರೆ. ತಮಿಳುನಾಡಿನಿಂದ ಕಮಲಾಪುರದ ದೇವಸ್ಥಾನಕ್ಕೆ ಯುವಕ ಮತ್ತು ಕುಟುಂಬಸ್ಥರು ಬಂದಿದ್ದರು. ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.