ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಪಡಿತರದಾರನಿಗೆ 10 ಕೆ.ಜಿ ಅಕ್ಕಿ ನೀಡುವುದಾಗಿ ಕೈ ನಾಯಕರು ಘೋಷಣೆ ಮಾಡಿದ್ದರು. ಆದರೆ, ಯೋಜನೆಗೆ ಅಗತ್ಯವಾದಷ್ಟು ಅಕ್ಕಿ ದಾಸ್ತಾನು ಇಲ್ಲದ ಕಾರಣ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿ ಬದಲಾಗಿ ಫಲಾನಭವಿಗಳ ಖಾತೆಗೆ 170 ರೂಪಾಯಿ ಹಣ ವರ್ಗಾವಣೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಹಣ ತಲುಪಿಸುತ್ತಿದೆ.
ಆದ್ರೆ ಈ ಯೋಜನೆಯನ್ನು ಫಲಾನುಭವಿಗಳು ದುರುಪಯೋಗಪಡಿಸಿಕೊಳ್ಳುವುದು ಕಂಡು ಬಂದಿದೆ. ನಕಲಿ ಬಿಪಿಎಲ್ ಕಾರ್ಡ್ಗಳ ಹಾವಳಿ ಹೆಚ್ಚಾಗಿದೆ. ನಕಲಿ ಬಿಪಿಎಲ್ ಕಾರ್ಡ್ಗಳನ್ನು ಮಾಡಿಸಿಕೊಂಡು ಅಕ್ಕಿ ತೆಗೆದುಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ.
Eye Twitching: ಎಡಗಣ್ಣು ಪಟಪಟ ಅಂತ ಹೊಡೆದುಕೊಳ್ತಿದ್ರೆ ಹೀಗೆಲ್ಲಾ ಆಗ್ಬೋದಂತೆ!
ಇಂತಹ ಕಾರ್ಡ್ಗಳನ್ನು ರದ್ದುಗೊಳಿಸಲು ಸರ್ಕಾರ ಮುಂದಾಗಿದೆ. ಪರಿಶೀಲನೆ ಕಾರ್ಯ ತ್ವರಿಗಗತಿಯಲ್ಲಿ ಸಾಗುತ್ತಿದೆ. ಸಚಿವ ಸಂಪುಟ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಹಣದ ಬದಲಿಗೆ ಎಣ್ಣೆ ಬೇಳೆಗಳನ್ನು ಒಳಗೊಂಡ ಕಿಟ್ಗಳನ್ನು ನೀಡುವ ಬಗ್ಗೆ ಚರ್ಚೆಯಾಗಿದೆ. ರಾಜ್ಯದಲ್ಲಿ ಬರೋಬ್ಬರಿ 1 ಕೋಟಿ 13 ಲಕ್ಷ ಜನರ ಬಳಿ ನಕಲಿ ಬಿಪಿಎಲ್ ಕಾರ್ಡ್ಗಳಿವೆ ಶೇ.80 ರಷ್ಟು ಜನರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದಾರೆ. ಈಗಾಗಲೇ ನೀತಿ ಆಯೋಗವೂ ಸಹ ತೀವ್ರ ಆಕ್ಷೇಪವನ್ನ ವ್ಯಕ್ತಪಡಿಸಿದೆ.
ಮುಂಬರುವ ದಿನಗಳಲ್ಲಿ ನಕಲಿ ಬಿಪಿಎಲ್ ಕಾರ್ಡ್ಗಳ ರದ್ದು ವಿಚಾರ ಮಹತ್ವದ ಬೆಳವಣಿಗೆ ಆಗಲಿದೆ. ಇಂತಹ ನಕಲಿಗಳನ್ನು ಎಪಿಎಲ್ ಕಾರ್ಡ್ಗೆ ವರ್ಗಾಯಿಸಲು ಸರ್ಕಾರ ಚಿಂತನೆ ನಡೆಸಿದೆ. . ಹೀಗಾಗಿ ಇಲಾಖಾ ಮಟ್ಟದಲ್ಲೇ ಸಮಿತಿ ರಚನೆಗೆ ಚಿಂತನೆ ನಡೆಸಲಾಗುತ್ತಿದೆ. ಹೀಗಾದಲ್ಲಿ ಅಕ್ರಮಗಳಿಗೆ ತಡೆ ಬೀಳಲಿದೆ.