ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶಕ್ಕೆ ಕರೆದುಕೊಂಡು ಹೋಗಿದ್ದ ನೌಕೆ ಇಂದು ಸೆಪ್ಟೆಂಬರ್ 7ರಂದು ಭೂಮಿಗೆ ಮರಳಿದೆ. ಜೂನ್ ಮೊದಲ ವಾರದಲ್ಲಿ ಬೋಯಿಂಗ್ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶಕ್ಕೆ ಕರೆದುಕೊಂಡು ಹೋಗಿತ್ತು.
ತಾಂತ್ರಿಕ ಸಮಸ್ಯೆ ಉಂಟಾಗಿ ಇಬ್ಬರೂ ಗಗನಯಾತ್ರಿಗಳು ಭೂಮಿಗೆ ಮರಳಲು ಸಾಧ್ಯವಾಗಲಿಲ್ಲ. ಇದೀಗ ಬಾಹ್ಯಾಕಾಶ ನೌಕೆಯು ಸಿಬ್ಬಂದಿ ಇಲ್ಲದೆ ಭೂಮಿಗೆ ವಾಪಸ್ಸಾಗಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರಿಲ್ಲದೆ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆ ನಿನ್ನೆ ಹೊರಟು ನ್ಯೂ ಮೆಕ್ಸಿಕೋ ಮರುಭೂಮಿಯಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ತಾಂತ್ರಿಕ ಸಮಸ್ಯೆಗಳಿಂದ ಬಾಹ್ಯಾಕಾಶಕ್ಕೆ ಹೋದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 2025ರ ಫೆಬ್ರವರಿಯವರೆಗೆ ಬಾಹ್ಯಾಕಾಶದಲ್ಲೇ ಇರುವಂತಾಗಿದೆ. ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಇತರ ಏಳು ಮಂದಿಯೊಂದಿಗೆ ಪೂರ್ಣಾವಧಿಯ ಗಗನಯಾತ್ರಿಗಳಾಗಿದ್ದಾರೆ. ಇವರುಗಳು ಸುರಕ್ಷಿತವಾಗಿ ಭೂಮಿಗೆ ಮರಳಲ್ಲಿ ಎಂದು ಪ್ರತಿಯೊಬ್ಬರು ಆಶಿಸುತ್ತಿದ್ದಾರೆ.