ರೀಲ್ ಆಂಡ್ ರಿಯಲ್ ಲೈಫ್ನಲ್ಲಿ ಬಹಳ ಕಡಿಮೆ ಸ್ನೇಹಿತರನ್ನು ಹೊಂದಿರುವ ರಾಧಿಕಾ ಕುಮಾರಸ್ವಾಮಿ ತಮ್ಮ ಫ್ರೀ ಟೈಂನ ಕುಟುಂಬಸ್ಥರ ಜೊತೆ ಕಳೆಯುತ್ತಾರೆ. ಗೌರಿ ಹಬ್ಬದ ದಿನ ಮೊದಲ ಸಲ ತಮ್ಮ ಫ್ಯಾಮಿಲಿ ಬಗ್ಗೆ ರಾಧಿಕಾ ಹಂಚಿಕೊಂಡಿದ್ದಾರೆ.
ಮಗಳನ್ನು ಟೆನ್ನಿಸ್ ಪ್ಲೇಯರ್ ಮಾಡಬೇಕು ಎಂದು ಅವರ ತಂದೆ ಮತ್ತು ನನ್ನ ಆಸೆ ಆಗಿತ್ತು, ಈಗ ನಮ್ಮ ಆಸೆಯನ್ನು ಆಕೆ ಪೂರೈಸುತ್ತಿದ್ದಾಳೆ. ಇದುವರೆಗೂ ಅಕೆ ಮೇಲೆ ನಾವು ಯಾವುದೇ ಪ್ರೆಶರ್ ಹಾಕಿಲ್ಲ ಏಕೆಂದರೆ ನನ್ನ ತಂದೆ ತಾಯಿ ಯಾವುದೇ ರೀತಿಯಲ್ಲಿ ಪ್ರೆಶರ್ ಹಾಕಿಲ್ಲ…ಇದೇ ಮಾಡು ಹೀಗೆ ಮಾಡು ಎಂದು ಹೇಳಿಲ್ಲ. ತುಂಬಾ ಒತ್ತಡ ಹಾಕಿದರೆ ಮಕ್ಕಳು ತಪ್ಪು ದಾರಿ ಹಿಡಿಯುವ ಸಾಧ್ಯತೆಗಳು ಜಾಸ್ತಿ ಇರುತ್ತದೆ ಹೀಗಾಗಿ ಮಗಳಿಗೆ ನಾನು ಪ್ರೆಶರ್ ಹಾಕುತ್ತಿಲ್ಲ. ಅವರ ಅಪ್ಪನಿಗೆ ಒಂದು ಕನಸು ಇತ್ತು…ಮಗಳು ಟೆನ್ನಿಸ್ ಪ್ಲೇಯರ್ ಆಗಬೇಕು ಎಂದು..ಅದೇ ಹಾದಿಯಲ್ಲಿ ಆಕೆ ಅದನ್ನು ಪೂರೈಸುತ್ತಿದ್ದಾಳೆ’ ಎಂದು ರಾಧಿಕಾ ಹೇಳಿದ್ದಾರೆ
ರಾಧಿಕಾ ಕುಮಾರಸ್ವಾಮಿ ತಮ್ಮ ಮಗಳು ಶಮಿಕಾ ಫೋಟೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಮ್ಮ ಫ್ಯಾಮಿಲಿಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಶಮಿಕಾ ವಿಚಾರವನ್ನು ಎಲ್ಲೂ ರಿವೀಲ್ ಮಾಡುವಂತಿಲ್ಲ. ಆಕೆಯ ವಿಚಾರಗಳ ಬಗ್ಗೆ ಹೆಚ್ಚು ಹೇಳುವಂತಿಲ್ಲ. ದೊಡ್ಡ ರೀತಿಯಲ್ಲಿ ಅವಳನ್ನು ಪರಿಚಯಿಸುವ ಆಸೆ ಇದೆ ಅಲ್ಲಿಯವರೆಗೂ ನೀವು ಕಾಯಲೇಬೇಕು ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಹಬ್ಬ ಅಂದ್ರೆ ಶಮಿಕಾಗೂ ತುಂಬಾ ಖುಷಿ ಆಗುತ್ತೆ. ಎಲ್ಲ ವಿಚಾರದಲ್ಲೂ ಅವಳು ನನಗಿಂತ ಜೋರಾಗಿದ್ದಾಳೆ. ಆ್ಯಕ್ಟಿಂಗ್, ಡ್ಯಾನ್ಸ್ ಹಾಗೂ ಹಬ್ಬಗಳ ಟೈಮ್ ನಲ್ಲಿ ಮೇಕಪ್ ವಿಚಾರದಲ್ಲೂ ನನ್ನನ್ನು ಮೀರಿಸಿದ್ದಾಳೆ. ಅವಳು ಸ್ವೀಟ್ ಅನ್ನು ಕೂಡ ಹೆಚ್ಚಾಗಿಯೇ ತಿನ್ನುತ್ತಾಳೆ ಜೊತೆಗೆ ವರ್ಕೌಟ್ ಕೂಡ ಮಾಡ್ತಾಳೆ ಎಂದಿದ್ದಾರೆ.
ಯೂಟ್ಯೂಬ್ ಗಳಲ್ಲಿ ವರ್ಕೌಟ್, ಡ್ಯಾನ್ಸ್ ಸ್ಟೆಪ್ಸ್ ಗಳನ್ನು ನೋಡಿ ನನಗೂ ಫಾರ್ವಡ್ ಮಾಡ್ತಾಳೆ. ನೀವು ಇದನ್ನು ಕಲಿಬೇಕು ಅಂತ ಟಿಪ್ಸ್ ಕೂಡ ಕೊಡುತ್ತಿರುತ್ತಾಳೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ. ನನ್ನ ಮಗಳಿಗೂ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಹುಚ್ಚು. ಕೆಲವೊಮ್ಮೆ ನಾನು ಚೈಲ್ಡಿಶ್ ಆಗಿ ಆಡ್ತೀನಿ. ಅವಳು ಒಮ್ಮೆಮ್ಮೆ ನನ್ನನ್ನು ಕೇಳ್ತಾಳೆ. ನೀವು ನನಗೆ ತಾಯಿನಾ? ಅಥವಾ ನನ್ನ ಮಗಳಾ ಎಂದು ಕೇಳ್ತಾನೆ ಇರ್ತಾಳೆ ಎಂದು ರಾಧಿಕಾ ಕುಮಾರಸ್ವಾಮಿ ಮಗಳ ಬಗ್ಗೆ ಮಾಹಿತಿ ಹಂಚಿಕೊಂಡ್ರು.