ಚಿಕ್ಕಮಗಳೂರು :- ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ಗಣಪತಿ ತರಲು ಹೋಗುತ್ತಿದ್ದ ಟಾಟಾ ಏಸ್ ಆಟೋ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ಜರುಗಿದೆ.
ಸ್ಮೈಲ್ ಗುರು ರಕ್ಷಿತ್ ಸಿನಿಮಾಗೆ ‘ಭೀಮ’ ಬಲ…ಅಮ್ಮು ಟೈಟಲ್ ಟೀಸರ್ ರಿಲೀಸ್!
ಲಿಂಗದಹಳ್ಳಿ ನಿವಾಸಿಗಳಾದ ಮೃತ ಯುವಕರು 20 ವರ್ಷದ ಶ್ರೀಧರ್, 20 ವರ್ಷದ ಧನುಷ್ ಎಂದು ತಿಳಿದು ಬಂದಿದೆ.
ಗಣಪತಿ ತರಲು 9 ಜನ ಯುವಕರು ಟಾಟಾ ಏಸ್ ಆಟೋದಲ್ಲಿ ಹೋಗುತ್ತಿದ್ದರು. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಯುವಕರ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಮೂವರು ಯುವಕರಿಗೆ ಹೆಚ್ಚಿನ ಗಾಯವಾಗಿರುವ ಹಿನ್ನೆಲೆ, ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಣಪತಿ ತರಲು ಟಾಟಾ ಏಸ್ ನಲ್ಲಿ ತರೀಕೆರೆಗೆ ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅವಘಡ ಸಂಭವಿಸಿದೆ.
ಲಿಂಗದಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.