ಸದಾ ವಿಭಿನ್ನವಾಗಿ ಗುರತಿಸಿಕೊಳ್ಳುವ, ಎಲ್ಲರೊಳಗು ಒಂದಾಗಿ ಬೆರೆಯುವ ಕಾರ್ಮಿಕ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಇಂದು ಸಂಜೆ ಧಾರವಾಡದಲ್ಲಿ ಜರುಗಿದ ಜಿಲ್ಲಾಮಟ್ಟದ ಶಿಕ್ಷಕ ದಿನಾಚರಣೆಯಲ್ಲಿ ಶಿಕ್ಷಕರು ಪ್ರಸ್ತುತಪಡಿಸಿದ ಜಾನಪದ ನೃತ್ಯದಲ್ಲಿ ಬೆಂಕಿ ಕುಂಡವನ್ನು ತಲೆ ಮೇಲೆ ಹೊತ್ತು ನೃತ್ಯ ಮಾಡುವ ಮೂಲಕ ಶಿಕ್ಷಕರ ಸಂಭ್ರಮದ ಕ್ಷಣಗಳಿಗೆ ಹೆಜ್ಹೆ ಹಾಕಿದರು.
Gowri Bagina: ಗೌರಿ ಬಾಗಿನದಲ್ಲಿ ಇರಲೇಬೇಕಾದ ವಸ್ತುಗಳ ಬಗ್ಗೆ ಗೊತ್ತೇ..? ಇಲ್ಲಿದೆ ನೋಡಿ
ಹೌದು ಸಚಿವ ಸಂತೋಷ ಲಾಡ್ ಅವರು, ಇಂದು ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಮತ್ತು ವಿಶಿಷ್ಟವಾದ ಜೋಗುತಿ ಜಾನಪದ ನೃತ್ಯಕ್ಕೆ ಕಲಾವಿದ ಶಿಕ್ಷಕ, ಶಿಕ್ಷಿಯರ ಜೊತೆಗೆ ಬೆಂಕಿ ಕುಂಡವನ್ನು ತಲೆ ಮೇಲೆ ಹೊತ್ತು ನೃತ್ಯಕ್ಕೆ ಹೆಜ್ಜೆ ಹಾಕಿ, ಸಚಿವರು ಸಂಭ್ರಮಿಸಿದರು. ಶಿಕ್ಷಕ ಕಲಾವಿದರ ಸಿರಿಗಂಧ ಜಾನಪದ ಕಲಾಬಳಗದ ಪ್ರಕಾಶ ಕಂಬಳಿ ಮತ್ತು ಜಯಲಕ್ಷ್ಮಿ ಎಚ್. ಅವರು ತಮ್ಮ ಸಹ ಕಲಾ ಶಿಕ್ಷಕರೊಂದಿಗೆ ಜಾನಪದ ನೃತ್ಯ ಪ್ರದರ್ಶಿಸಿ, ಪ್ರೇಕ್ಷಕರ ಮನ ಸೆಳೆದರು.