ಬೆಂಗಳೂರು:- ಗೌರಿ-ಗಣೇಶನನ್ನ ಸ್ವಾಗತಿಸಲು ಸಿಟಿ ಮಂದಿ ಸಜ್ಜಾಗಿದ್ದು, ನಿನ್ನೆಯೇ ಕೆಆರ್ ಮಾರ್ಕೆಟ್ನಲ್ಲಿ ಖರೀದಿ ಜೋರಾಗಿತ್ತು. ಹೂವು, ಹಣ್ಣು, ಗರಿಕೆ, ಎಕ್ಕದ ಹಾರದ ಜೊತೆಗೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ವ್ಯಸ್ತರಾಗಿದ್ದರು.
Rain News: ಕರ್ನಾಟಕದ ಜಿಲ್ಲೆಗೆ ಭಾರಿ ಮಳೆ ಎಚ್ಚರಿಕೆ; ಬೆಂಗಳೂರಿನ ವಾತಾವರಣ ಹೇಗೆ?
ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ. ಇದು ಗ್ರಾಹಕರಿಗೆ ಸ್ವಲ್ಪಮಟ್ಟಿಗೆ ಬಿಸಿ ಮುಟ್ಟಿಸಿತ್ತು.
ಹೂ, ಹಣ್ಣುಗಳ ದರ ವಿವರ
ಕನಕಾಂಬರ ಕೆಜಿಗೆ – 3000 ರೂ. ಮಲ್ಲಿಗೆ – ಕೆಜಿಗೆ 600 ರೂ. ಗುಲಾಬಿ- ಕೆಜಿಗೆ 250 ರೂ. ಸೇವಂತಿಗೆ – ಕೆಜಿಗೆ 180 ರೂ. ಸುಗಂಧರಾಜ-ಕೆಜಿಗೆ 240 ರೂ
ಹಣ್ಣುಗಳ ದರ
ಸೇಬು- ಕೆಜಿಗೆ 120 ರಿಂದ 200ರೂ.
ದಾಳಿಂಬೆ- ಕೆಜಿಗೆ 160 ರೂ.
ಏಲಕ್ಕಿ ಬಾಳೆ – ಕೆಜಿಗೆ 120 ರೂ.
ಸೀತಾಫಲ- ಕೆಜಿಗೆ 100 ರೂ.
ಸಪೋಟ- ಕೆಜಿಗೆ 100 ರೂ.
ದ್ರಾಕ್ಷಿ- ಕೆಜಿಗೆ 120- 200 ರೂ.
ಅನಾನಸ್- ಎರಡಕ್ಕೆ 100-120 ರೂ.
ಹಬ್ಬದ ಸಾಮಾಗ್ರಿಗಳ ದರ
ಬಾಳೆಕಂದು- ಜೋಡಿಗೆ 60 ರೂ.
ಮಾವಿನ ತೋರಣ- 20 ರೂ.
ಗರಿಕೆ-ಕಟ್ಟಿಗೆ 30 ರೂ.
ಬಿಲ್ವಪತ್ರೆ- 20ರೂ.
ಎಕ್ಕದಹಾರ- 50 ರಿಂದ 60 ರೂ.
ಇನ್ನು ಒಂದೆಡೆ ಹಬ್ಬದ ಸಾಮಾಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್ಗೆ ಎಂಟ್ರಿಕೊಟ್ಟಿರುವ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಸೃಷ್ಟಿಯಾಗಿದೆ.
ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿತ್ತು. ಮುಂಬೈ, ಪುಣೆ ಸೇರಿದಂತೆ ಹಲವೆಡೆಯಿಂದ ಬಂದ ಗಣಪನ ಮೂರ್ತಿಗಳು ಮಾರಾಟವಾಗಿದ್ದಕ್ಕೆ ವ್ಯಾಪಾರಿಗಳು ಖುಷಿಯಾಗಿದ್ದಾರೆ.