ಬೆಂಗಳೂರು: ಕೊಲೆ ಪ್ರಕರಣದಲ್ಲಿ ದರ್ಶನ್ ಅವರು ಜೈಲು ಸೇರಿದ ಮೇಲೆ ಅವರ ಅಭಿಮಾನಿಗಳು ಒಂದಿಲ್ಲ ಒಂದು ಹುಚ್ಚಾಟ ತೋರುತ್ತಿದ್ದಾರೆ. ಹಿಂದೊಮ್ಮೆ ಪರಪ್ಪನ ಅಗ್ರಹಾರದಲ್ಲಿ ಇದ್ದ ವೇಳೆ ದರ್ಶನ್ ಅವರ ಕೈದಿ ನಂಬರ್ ರಾತ್ರೋ ರಾತ್ರಿ ಟ್ರೆಂಡ್ ಆಗಿತ್ತು. ಅಲ್ಲದೇ ಬಳ್ಳಾರಿ ಜೈಲಿಗೆ ಬಂದ ಮೇಲು ಅವರ ಟೀ ಶರ್ಟ್ ಹಾಗೂ ಕೈದಿ ನಂಬರ್ ಟ್ರೆಂಡ್ ಆಗಿತ್ತು.
ಅಲಂಕಾರ ಪ್ರಿಯ ಗಣಪನಿಗೆ ತುಳಸಿ ದಳ ಅರ್ಪಿಸಲ್ಲ ಯಾಕೆ!? ಹಿಂದಿರುವ ಪೌರಾಣಿಕ ಹಿನ್ನೆಲೆ ಏನು!?
ಬಳ್ಳಾರಿ ಜೈಲಿಗೆ ಸ್ಥಳಾಂತರ ಆದಮೇಲೆ ವಾಹನಗಳ ಮೇಲೆ ಆಕ್ಷೇಪಾರ್ಹ, ಪ್ರಚೋದನಾಕಾರಿ, ಬೇರೆ ನಟರ ಅಭಿಮಾನಿಗಳ ವಿರುದ್ಧ ಟಾಂಗ್ ಕೊಡುವಂತೆ ಸ್ಟಿಕ್ಕರ್, ಬರಹಗಳ ಅಳವಡಿಕೆ ಮಾಡುವುದು ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಬರಹಗಳು ಹೆಚ್ಚಾಗಿವೆ. ಈ ಹಿಂದೆ ಈ ಮಟ್ಟಿಗೆ ಬರಹಗಳನ್ನು ವಾಹನಗಳ ಮೇಲೆ ಹಾಕಿರಲಿಲ್ಲ. ಇದು ಆರ್ಟಿಒ ಹಾಗೂ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಅನವಶ್ಯಕ, ಪ್ರಚೋದನಾಕಾರಿ ಬರಗಳು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ನೆಚ್ಚಿನ ನಟರ ಪೋಟೋಗಳನ್ನು ವಾಹನಗಳ ಮೇಲೆ ಹಾಕುವುದರ ಜತೆಗೆ ಪ್ರಚೋದನಾಕಾರಿ ಬರಹ, ಸ್ಟಿಕ್ಕರ್ ಅಂಟಿಸಲು ಅವಕಾಶವಿಲ್ಲ ಎಂದು ಆರ್ಟಿಒ ಅಧಿಕಾರಿಗಳು ಹೇಳಿದ್ದಾರೆ.
ಈವರೆಗೆ ನಂಬರ್ ಪ್ಲೇಟ್ ಮೇಲೆ ಮಾತ್ರ ಬರಹ, ಸ್ಟಿಕ್ಕರ್ ಇದ್ದರೆ ಗಮನಿಸುತ್ತಿದ್ದೆವು. ಇನ್ನುಮುಂದೆ ವಾಹನಗಳ ಇತರ ಭಾಗಗಳಲ್ಲಿ ಕೂಡ ಅನಧಿಕೃತ ಬರಹ ಹಾಕಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಎಚ್ಚರಿಕೆ ಉಲ್ಲಂಘಿಸಿ ಸ್ಟಿಕ್ಕರ್, ಬರಹ ಅಂಟಿಸಿದಲ್ಲಿ ಮೊದಲ ಬಾರಿಗೆ 500 ರೂಪಾಯಿ, ಎರಡನೇ ಬಾರಿ 1000 ರೂಪಾಯಿ, ಮೂರನೇ ಬಾರಿ ಅದೇ ತಪ್ಪು ಮಾಡಿದರೆ ಪರವಾನಗಿಯನ್ನೇ ರದ್ದು ಮಾಡುತ್ತೇವೆ ಎಂದು ಆರ್ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆರ್ಟಿಒ ಅಡಿಷನಲ್ ಕಮಿಷನರ್ ಮಲ್ಲಿಕಾರ್ಜುನ್ ಮಾಹಿತಿ ನೀಡಿದ್ದಾರೆ.
ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ಆರ್ಟಿಒ ಇಲಾಖೆಗಳಿಗೆ ನಿರ್ದೇಶನ ಕೊಡುತ್ತಾ ಬಂದಿದೆ. ಅದರ ಅನ್ವಯ ಆರ್ಟಿಒ ಅಧಿಕಾರಿಗಳು ಕೇಸುಗಳನ್ನ ದಾಖಲು ಮಾಡುತ್ತಾ ಬಂದಿದ್ದಾರೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಹಾಗೂ ಪ್ರಚಾರ ಮಾಡುವ ಕೆಲಸ ಆರ್ಟಿಒ ಮಾಡುತ್ತಿದೆ. ಜೊತೆಗೆ 3 ವರ್ಷದಲ್ಲಿ ಹಲವು ಪ್ರಕರಣ ದಾಖಲು ಮಾಡಿದ್ದೇವೆ ಎಂದೂ ಅವರು ತಿಳಿಸಿದ್ದಾರೆ.
ಕಾನೂನು ಎಲ್ಲರಿಗೂ ಒಂದೇ. ಎಲ್ಲರೂ ಕಾನೂನು ಪಾಲಿಸಬೇಕು ಎಂದು ವಾನಹ ಸವಾರ ಶಿವಮೂರ್ತಿ ಎಂಬವರು ಅಭಿಪ್ರಾಯಪಟ್ಟಿದ್ದಾರೆ.