ಬೆಂಗಳೂರು:- ದರ್ಶನ್ ಕನ್ನಡ ಇಂಡಸ್ಟ್ರಿಗೆ ಬೇಕು, ಈ ಸ್ಥಿತಿ ಯಾರಿಗೂ ಬೇಡ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ.
ಜೈಲು ಸೇರಿರುವ ನಟ ದರ್ಶನ್ ಸ್ಥಿತಿ ಕಂಡು ಬೇಸರವಾಗ್ತಿದೆ ಎಂದಿದ್ದಾರೆ. ಈಗ ದರ್ಶನ್ ವಿಚಾರ ಮಾತಾಡುವಾಗ ಮನಸ್ಸಿಗೆ ನೋವಾಗ್ತಿದೆ. ಅವರ ಜೊತೆ ನಾನು ಎರಡು ಸಿನಿಮಾ ಮಾಡಿದ್ದೇನೆ. ಮಂಡ್ಯ ಹಾಗೂ ಅನಾಥರು ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಯಾವ ರೀತಿ ನಡೆದುಕೊಳ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ರು.
ಸಿನಿಮಾ ಶೂಟಿಂಗ್ ವೇಳೆ ಸೆಟ್ ನಲ್ಲಿ ಎಲ್ಲರನ್ನು ಅಣ್ಣ, ತಮ್ಮ ಎಂದು ಕರೆಯುತ್ತಲೇ ಮಾತಾಡಿಸುತ್ತಿದ್ರು. ಎಷ್ಟೇ ದೊಡ್ಡ ನಟನಾಗಿ ಬೆಳೆದಿದ್ರು. ಸ್ಟಾರ್ ಎನ್ನುವ ರೀತಿ ಯಾರ ಜೊತೆ ಕೂಡ ನಡೆದುಕೊಳ್ಳುತ್ತಿರಲಿಲ್ಲ. ದರ್ಶನ್ ಜೀವನದಲ್ಲಿ ಈ ರೀತಿ ನಡೆದಿದೆ ಎನ್ನುವ ವಿಚಾರ ಕೇಳಿ ನನಗೆ ನಿಜಕ್ಕೂ ಶಾಕ್ ಆಯ್ತು ಎಂದರು.
ಈ ವಿಚಾರವನ್ನು ಕೇಳಿ ನನಗೆ ನಂಬಲು ಆಗಿಲ್ಲ. ಅವರ ಜೀವನದಲ್ಲಿ ಏನಾಗಿದೆ ಅನ್ನೋದು ಯಾರಿಗೂ ತಿಳಿದಿರುವುದಿಲ್ಲ. ನನಗೆ ಟಿವಿಯಲ್ಲಿ ನೋಡಿದ್ದು, ಅವರು-ಇವರು ಹೇಳಿದ್ದು ಮಾತ್ರ ಗೊತ್ತಿದೆ. ಗೊತ್ತಿಲ್ಲದೆ ಯಾರ ಬಗ್ಗೆ ಕೂಡ ಕಮೆಂಟ್ ಮಾಡೋದು ತಪ್ಪು ಎಂದ್ರು