ಚಳ್ಳಕೆರೆ : ತಾಲೂಕು ದಂಡಾಧಿಕಾರಿಗಳ ವಾಹನಕ್ಕೆ ಪೃಥ್ವಿರಾಜ್ ಎಂಬ ಯುವಕ ಬೆಂಕಿ ಹಚ್ಚಿ ಹುಚ್ಚಾಟ ಮೆರೆದ ಘಟನೆ ಚಳ್ಳಕೆರೆಯಲ್ಲಿ ನಡೆದಿದೆ.
ಸ್ಕೂಲ್ ಬಸ್ ಅಪಘಾತ ಕೇಸ್: ದುರಂತಕ್ಕೆ ವಿಲನ್ ಆಯ್ತಾ ರಸ್ತೆ ಗುಂಡಿಗಳು!
ಇತ್ತೀಚಿಗಷ್ಟೇ ಬೆಂಗಳೂರಿನ ವಿಧಾನಸೌಧದ ಮುಂದೆ ತನ್ನ ಬೈಕಿಗೆ ತಾನೇ ಬೆಂಕಿ ಹಚ್ಚಿ ಹುಚ್ಚಾಟ ಮೆರೆದಿದ್ದನು. ಇದೀಗ ಚಳ್ಳಕೆರೆಯಲ್ಲೂ ಇಂಥದೊಂದು ಹುಚ್ಚಾಟ ಮೆರೆದಿದ್ದಾನೆ.
ತಹಶೀಲ್ದಾರ್ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, ಕಚೇರಿ ಮುಂದೆ ಕಾರು ನಿಲ್ಲಿಸಿದ್ದರು. ತಹಸಿಲ್ದಾರ್ ಅವರು ಒಳಗಡೆ ಹೋದ ಕೆಲವೇ ಕ್ಷಣಗಳಲ್ಲಿ ಏಕಾಯಕಿ ಪೃಥ್ವಿರಾಜ್ ಸರ್ಕಾರಿ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಬಹು ದೊಡ್ಡ ಅನಾಹುತನಾ ತಪ್ಪಿದೆ. ಬೆಂಕಿ ತಗುಲಿದ ತಹಶೀಲ್ದಾರ್ ವಾಹನದ ಮುಂಭಾಗ ಸ್ವಲ್ಪ ಕಪ್ಪು ಆಗಿದೆ.
ಸ್ಥಳಕ್ಕೆ ಆಗಮಿಸಿದ ಚಳ್ಳಕೆರೆ ಪೊಲೀಸರು ಪೃಥ್ವಿರಾಜ್ ನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.